Sunday, April 20, 2025
Google search engine

HomeUncategorizedರಾಷ್ಟ್ರೀಯಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಟಾಪನೆ: ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್, ಮುಕೇಶ್ ಅಂಬಾನಿಗೆ ಆಹ್ವಾನ

ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಟಾಪನೆ: ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್, ಮುಕೇಶ್ ಅಂಬಾನಿಗೆ ಆಹ್ವಾನ

ಅಯೋಧ್ಯೆ: ಶ್ರೀರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಟಾಪನೆ ಸಮಾರಂಭಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಉದ್ಯಮಿ ಮುಕೇಶ್​ ಅಂಬಾನಿ ಸೇರಿದಂತೆ 7 ಸಾವಿರ ಗಣ್ಯರನ್ನು ಆಹ್ವಾನಿಸಿದೆ.

ದೂರದರ್ಶನದಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್ (ಲಾರ್ಡ್ ರಾಮ್), ಮತ್ತು ಸೀತಾ ದೇವಿಯ ಪಾತ್ರವನ್ನು ನಿರ್ವಹಿಸಿದ ದೀಪಿಕಾ ಚಿಖಾಲಿಯಾ ಅವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನವನ್ನು ಕಳುಹಿಸಲಾಗಿದೆ.

ಜನವರಿ 22, 2024 ರಂದು ನಡೆಯುವ ವಿಗ್ರಹ ಪ್ರತಿಷ್ಟಾಪನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಗಾಗಲೇ ಆಹ್ವಾನಿಸಲಾಗಿದೆ. ಟ್ರಸ್ಟ್ 3,000 ವಿವಿಐಪಿಗಳು ಸೇರಿದಂತೆ 7,000 ಜನರಿಗೆ ಆಹ್ವಾನ ಕಳುಹಿಸಿದೆ.

1992ರಲ್ಲಿ ಹತ್ಯೆಗೀಡಾದ ಕರಸೇವಕರ ಕುಟುಂಬಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಆಹ್ವಾನಿತ ವಿವಿಐಪಿಗಳಲ್ಲಿ ಆರ್ ​ಎಸ್ ​ಎಸ್ ​ನ ಸರಸಂಘ ಚಾಲಕ ಮೋಹನ್ ಭಾಗವತ್, ಯೋಗ ಗುರು ರಾಮ್ ದೇವ್, ಕೈಗಾರಿಕೋದ್ಯಮಿ ರತನ್ ಟಾಟಾ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಕೂಡ ಸೇರಿದ್ದಾರೆ.

RELATED ARTICLES
- Advertisment -
Google search engine

Most Popular