Monday, April 21, 2025
Google search engine

Homeಸ್ಥಳೀಯರೂಬಿಕ್ ಕ್ಯೂಬ್ ನಲ್ಲಿ ಮೂಡಿದ ಶ್ರೀರಾಮ:  ಬಾಲಕ ಪ್ರಣವ್ ನ ಕೈಚಳಕ

ರೂಬಿಕ್ ಕ್ಯೂಬ್ ನಲ್ಲಿ ಮೂಡಿದ ಶ್ರೀರಾಮ:  ಬಾಲಕ ಪ್ರಣವ್ ನ ಕೈಚಳಕ

ಪಿರಿಯಾಪಟ್ಟಣ: ಗೋಣಿಕೊಪ್ಪ ರಸ್ತೆಯ ನಿವಾಸಿ ಮೃದುಲಾ ಮತ್ತು ಪಿ.ಎನ್ ವಿನಯ್ ದಂಪತಿಗಳ ಪುತ್ರ ಪ್ರಣವ್ ರೂಬಿಕ್ ಕ್ಯೂಬ್ ನಲ್ಲಿ ಶ್ರೀರಾಮನ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ಧಾನೆ.

ಅಯೋಧ್ಯಾದಲ್ಲಿ ನಡೆಯುತ್ತಿರುವ ರಾಮವಿಗ್ರಹ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ದೇಶಾದ್ಯಂತ ರಾಮ ಜಪ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದಲ್ಲಿ ಬಾಲಕನೋರ್ವ ಈ ಸಾಧನೆ ಮಾಡಿದ್ಧಾನೆ.

12 ವರ್ಷದ ಬಾಲಕ ಪುಷ್ಪ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು ರೂಬಿಕ್ ಕ್ಯೂಬ್ ಸಾಲ್ವ್ ಮಾಡುವುದರಲ್ಲಿ ಪರಿಣಿತ. ಈತ  22 ವಿವಿಧ ರೀತಿ  ಕ್ಯೂಬ್ ಗಳನ್ನು ಸಾಲ್ವ್ ಮಾಡಿ ಕರ್ನಾಟಕ ಬುಕ್ ಆಫ್ ರೇಕಾರ್ಡ್ ದಾಖಲೆ ಮಾಡಿದ್ಧಾನೆ.ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಈತನ ಸಾಧನೆ  ದಾಖಲಾಗಿದೆ.

ಬರೋಬ್ಬರಿ 498 ಕ್ಯೂಬ್ ಗಳನ್ನು ಬಳಿಸಿ ಶ್ರೀರಾಮನ ಚಿತ್ರ ಬಿಡಿಸಿ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ತನ್ನದೆ ಆದ ಸೇವೆ ಸಲ್ಲಿಸಿದ್ದಾನೆ. ಈತನ ಸಾಧನೆಗೆ ಪುಪ್ಪ ಶಾಲೆಯ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು  ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular