Saturday, March 28, 2026
Google search engine

Homeಸ್ಥಳೀಯಶ್ರೀರಾಮನವಮಿ ಕವಿಗೋಷ್ಠಿ: ಸಾಹಿತ್ಯಕ್ಕೆ ಹೊಸ ಚಿಂತನೆ : ರಾಮನ ಆದರ್ಶ ಜೀವನ ಮೌಲ್ಯಗಳಿಗೆ ಸ್ಪೂರ್ತಿ

ಶ್ರೀರಾಮನವಮಿ ಕವಿಗೋಷ್ಠಿ: ಸಾಹಿತ್ಯಕ್ಕೆ ಹೊಸ ಚಿಂತನೆ : ರಾಮನ ಆದರ್ಶ ಜೀವನ ಮೌಲ್ಯಗಳಿಗೆ ಸ್ಪೂರ್ತಿ

ಚಾಮರಾಜನಗರ : ಉತ್ತಮ ಸಾಹಿತ್ಯ ರಚನೆಗೆ ಅಮೂಲ್ಯ ಆಧ್ಯಾತ್ಮ ಗ್ರಂಥಗಳ ಅಧ್ಯಯನ ಅಗತ್ಯ. ದೇಶದ ಇತಿಹಾಸ, ಸಂಸ್ಕೃತಿ ,ಪರಂಪರೆಗಳ ಸಮಗ್ರ ಜ್ಞಾನದ ತಿಳುವಳಿಕೆ ಇರಬೇಕು ಎಂದು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ತಿಳಿಸಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಳಕು ಸಾಂಸ್ಕೃತಿಕ ಸಾಹಿತ್ಯ ಸಂಘಟನೆ ಹಮ್ಮಿಕೊಂಡಿದ್ದ ಶ್ರೀ ರಾಮನವಮಿ ಕವಿಗೋಷ್ಠಿ ಹಾಗೂ ಕನ್ನಡ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಶ್ರೀ ರಾಮನವಮಿಯ ದಿನ ಕವಿಗೋಷ್ಠಿಯನ್ನು ಆಯೋಜಿಸಿ ಪುರಾಣ ಪುರುಷರ ದೈವಿಕ ಶಕ್ತಿಯ ಬಗ್ಗೆ ತಮ್ಮ ಕವನಗಳ ಮೂಲಕ ಹೊಸ ಚಿಂತನೆಗೆ ಅವಕಾಶ ಮಾಡಿಕೊಟ್ಟ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳನ್ನ ಅರ್ಪಿಸುತ್ತಾ ನಿರಂತರವಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿ, ನೆಲ ,ಜಲ, ಭಾಷೆಯ ಬಗ್ಗೆ ಕಾರ್ಯಕ್ರಮಗಳು ಆಯೋಜನೆಯಾದಾಗ ಹಲವಾರು ಪ್ರತಿಭೆಗಳಿಗೆ ಅವಕಾಶ ಉಂಟಾಗುತ್ತದೆ. ಶ್ರೀ ರಾಮ ನವಮಿಯ ದಿನ ಸುಂದರ ಕಾರ್ಯಕ್ರಮ ರೂಪಿತವಾಗಿರುವುದು ಬಹಳ ಸಂತೋಷ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿ ಯವರು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸದಾಕಾಲ ಸೃಜನಶೀಲತೆಯನ್ನು ಬೆಳೆಸುತ್ತಿದ್ದಾರೆ .
ಶ್ರೀರಾಮ ಭಾರತದ ಆದರ್ಶ ಪುರುಷ. ಶ್ರೀ ರಾಮನ ಚಿಂತನೆಗಳು ಸರ್ವರಿಗೂ ಮಾದರಿಯಾದದ್ದು ಎಂದು ತಿಳಿಸಿದರು.

ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡಿದ ಮಾಜಿ ನಗರಸಭಾ ಸದಸ್ಯರಾದ ಗಾಯತ್ರಿ ಚಂದ್ರಶೇಖರ್ ರವರು ಶ್ರೀರಾಮನಾಮನ ಪ್ರಭಾವದಿಂದ ಅಂತರಂಗದ ವಿಕಾಸವಾಗಿ ಮನುಷ್ಯ ಪರಿಪೂರ್ಣನಾಗಿ ರೂಪಿತನಾಗಬಹುದು. ಭಕ್ತಿ ಶ್ರದ್ಧೆಯಿಂದ ರಾಮನ ಹೆಸರನ್ನು ಹೇಳಿದರೆ ಆನಂದದ ಬದುಕು ನಮ್ಮದಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಭಾಷಣ ಮಾಡಿದ ವಿದ್ವಾಂಸರಾದ ಪ್ರದೀಪ್ ಕುಮಾರ್ ದೀಕ್ಷಿತ್ ಶ್ರೀರಾಮ ನವಮಿ ಚೈತ್ರ ಮಾಸದಲ್ಲಿ ಬರುವಂತಹ ವಿಶೇಷವಾದ ಹಬ್ಬ. ಪ್ರಕೃತಿಯ ವಿಕಾಸ ಜೊತೆಗೆ ಮಾನವನ ಅಭಿವೃದ್ಧಿಗೆ ಪರ್ವಕಾಲ. ಚೈತ್ರ ಮಾಸದ ಶ್ರೀ ರಾಮನವಮಿಯ ದಿನ ಅರ್ಥಪೂರ್ಣವಾದ ಕವಿಗೋಷ್ಠಿ ಹಾಗೂ ಭಕ್ತಿ ಗೀತೆಗಳು ಗಾಯನವನ್ನು ರೂಪಿಸಿ ಜನರಿಗೆ ಸಂತೋಷವನ್ನು ಉಂಟು ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಶ್ರೀರಾಮ ಮತ್ತು ಕೃಷ್ಣರು ಭಾರತದ ಸಂಸ್ಕೃತಿ ಪರಂಪರೆಯ ಆಧಾರ ಸ್ತಂಭಗಳು. ಶ್ರೀರಾಮ ಮತ್ತು ಕೃಷ್ಣರ ಜೀವನ ಮತ್ತು ಪರಿಪೂರ್ಣವಾದ ಇತಿಹಾಸ ಅಧ್ಯಯನದಿಂದ ಮನುಷ್ಯನ ಅಹಂಕಾರ ದೂರವಾಗಿ ಸರಳತೆಯ ಮೂಲಕ ಜೀವನದ ಬದುಕನ್ನು ಸುಂದರಗೊಳಿಸುವಂತಹ ಜೀವನ ಮೌಲ್ಯಗಳನ್ನು ಬೆಳೆಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ರಾಮನವಮಿಯ ದಿನ ಕವಿಗೋಷ್ಠಿ ಹಾಗೂ ಕನ್ನಡ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ರೂಪಿಸಿದೆ. ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಕವಿಗಳಿಗೆ ಹಾಗೂ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದರು ಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು .

ಇದೇ ಸಂದರ್ಭದಲ್ಲಿ ಗುಂಡ್ಲುಪೇಟೆಯ ಇಂಜಿನಿಯರ್ ಹಾಗೂ ಗಾಯಕ ಮಯೂರ್ ರವರಿಗೆ ಜನಪದ ಗಾಯಕ ಸುರೇಶ್ ನಾಗದೇನಹಳ್ಳಿಬೆಳಕು ಸಂಸ್ಥೆ ನೀಡುವ ರಾಷ್ಟ್ರೀಯ ಸಾಂಸ್ಕೃತಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪದ್ಮಾ ಪುರುಷೋತ್ತಮ, ಗಾಯತ್ರಿ ಚಂದ್ರಶೇಖರ್, ರವಿಚಂದ್ರ ಪ್ರಸಾದ್ ,ಲಕ್ಷ್ಮೀ ನರಸಿಂಹ, ಪ್ರದೀಪ್ ಕುಮಾರ್ ದೀಕ್ಷಿತ್, ಬಿಕೆ ಆರಾಧ್ಯ,ಜಯಶೀಲ, ಶಿವಲಿಂಗ ಮೂರ್ತಿ ,ಸರಸ್ವತಿ ,ಗೀತಾ ,ಸುರೇಶ್ ಗೌಡ ,ಮಹದೇವಸ್ವಾಮಿ, ಉಪಸ್ಥಿತರಿದ್ದರು.
ಜನಪದ ಗಾಯಕ ಸುರೇಶ್ ನಾಯಕ್ ಹರದನಹಳ್ಳಿ ಮಯೂರ್ ರವರು ಕನ್ನಡ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ನೆರವೇರಿಸಿದರು.

RELATED ARTICLES
- Advertisment -
Google search engine

Most Popular