ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಣ್ಣಪುಟ್ಟ ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ಪಟ್ಟಣದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ತಾಲೂಕಿನ ವೈಷ್ಣವ ಸಮಾಜದ ವತಿಯಿಂದ ಏರ್ಪಡಿಸಿದ್ದ ಶ್ರೀ ರಾಮಾನುಜಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಣ್ಣಪುಟ್ಟ ಸಮಾಜ ಮುಖ್ಯವಾಹಿನಿಗೆ ಬರಬೇಕು ಎಲ್ಲರನ್ನೂ ಸರಿಸಮಾನವಾಗಿ ತೆಗೆದುಕೊಂಡು ಹೋಗಬೇಕು ಇದು ನಮ್ಮ ಕಾಂಗ್ರೇಸ್ ಪಕ್ಷದ ಧ್ಯಾಯವಾಗಿದೆ ಎಂದರು.
ಸರ್ಕಾರದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ರಾಮಾನುಜಾಚಾರ್ಯ ಜಯಂತಿ ಆಚರಿಸಲಾಗುತ್ತಿದೆ ತಾಲೂಕು ಮಟ್ಟದಲ್ಲಿ ಸಮುದಾಯದ ವತಿಯಿಂದ ಜಯಂತಿ ಆಚರಿಸುತ್ತಿದ್ದು ಮುಂದಿನ ಬಾರಿ ಸರ್ಕಾರದ ವತಿಯಿಂದ ಆಚರಿಸುವಂತೆ ತಾಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದ ಈ ಜಯಂತಿಯನ್ನು ಆಚರಿಸುವಂತೆ ಸರ್ಕಾರದ ಮೇಲೆ ಒತ್ತಾಡ ಏರಲಾಗುವುದು ಎಂದು ತಾಲೂಕಿನ ಎಲ್ಲಾ ವೈಷ್ಣವ ಸಮಾಜದ ವತಿಯಿಂದ ತಾಲೂಕಿನ ಎಲ್ಲಾಜನತೆಗೆ ರಾಮಾನುಜಾಚಾರ್ಯ ಜಯಂತಿಯ ಶುಭಾಶಯಗಳನ್ನು ಕೋರಿದರು.
ರಾಮಾನುಜಾಚಾರ್ಯರು ಸೇರಿದಂತೆ ಇಂತಹ ಮಹಾನೀಯರಿಂದ ನಾವು ತಿಳಿಯುವುದೇನೆಂದರೆ ಎಲ್ಲರೂ ಒಂದಾಗಿ ಬಾಳಬೇಕು ನಮ್ಮಲ್ಲಿ ಯಾವುದೇ ಬೇದ ಭಾವವಿಲ್ಲದೇ ಎಲ್ಲರನ್ನು ಸರಿಮಾನವಾಗಿ ಕಾಣಬೇಕೆಂಬುದು ಈ ಮಹಾನೀಯರ ಆಶಯವಾಗಿತ್ತು ಎಂದರು. ಸಮಾಜದ ಬೇಡಿಕೆಯಂತೆ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಜೀಣೋದ್ದಾರಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸಮಾಜಕ್ಕೆ ಕಾಂಗ್ರೇಸ್ ಪಕ್ಷ ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಸ್ಥಾನ ನೀಡಲಾಗುವುದು. ಮತ್ತು ವೈಷ್ಣವ ಸಮಾಜ ಸಿ.ಎ ನಿವೇಶನಕ್ಕೆ ಅರ್ಜಿ ಸಲ್ಲಿಸಿದರೆ ಸಮಾಜಕ್ಕೆ ಸಿ.ಎ ನಿವೇಶನ ನೀಡುವ ಭರವಸೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಲಲಿತ ರವರಿಂದ ಶ್ರೀ ರಾಮಾನುಜಚಾರ್ಯರ ಬಗ್ಗೆ ಕಿರುಪರಿಚಯವನ್ನು ಮಾಡಿಕೊಡಲಾಯಿತು. ಖಜಾಂಜಿ ಗಣೇಶ್ ರವರಿಂದ ವೈಷ್ಣವ ಸಂಘದ ಬೇಡಿಕೆಯನ್ನು ಮಂಡಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜಕ್ಕೆ ಅನನ್ಯ ಸೇವೆಸಲ್ಲಿಸಿದ ಕುಟುಂಬದವರಿಗೆ ಸನ್ಮಾನಿಸಲಾಯಿತು. ಶ್ರೀ ರಾಮಾನುಜಾಚಾರ್ಯರ ಪಲ್ಲಕ್ಕಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಶಿವುನಾಯಕ್, ಸದಸ್ಯರಾದ ಶಂಕರ್, ತೋಟದಾರ್ಯ, ಕಾಂಗ್ರೇಸ್ ವಕ್ತಾರ ಸೈಯದ್ ಜಾಬೀರ್, ಮಾಜಿ ಪುರಸಭಾ ಅಧ್ಯಕ್ಷ ನರಸಿಂಹರಾಜು, ಚರ‍್ನಹಳ್ಳಿ ಶಿವಣ್ಣ, ಮಾಜಿ ಸದಸ್ಯರಾದ ಮಹೇಶ್, ವೈಷ್ಣವ ಸಂಘದ ಸಂಘದ ಅಧ್ಯಕ್ಷರಾದ ಲೋಕೇಶ್, ಕಾರ್ಯದರ್ಶಿ ರುಕ್ಮಾಂಗ, ಖಂಜಾಜಿ ಗಣೇಶ್, ಉಪಾಧ್ಯಕ್ಷರಾದ, ರಂಗಸ್ವಾಮಿ, ಗೌರವಾಧ್ಯಕ್ಷರಾದ ಶ್ರೀನಿವಾಸಯ್ಯ, ಸಹಕಾರ್ಯದರ್ಶಿ ಸ್ಪಿನ್‌ಕೃಷ್ಣ ನಿರ್ದೇಶಕರಾದ ಜಯರಾಮ, ದಿಲೀಪ್, ನಾಗರತ್ನ, ಲಲಿತ, ಸವಿತಾ, ಮೂರ್ತಿ, ಗಿರೀಶ್, ವಿಠಲ್, ಮುತ್ತುರಾಜ್, ರತ್ನಮ್ಮ ರಾಮಣ್ಣ, ಪದ್ಮ ವೆಂಕಟೇಶ್, ಶಾಲಿನಿ, ರಂಗಸ್ವಾಮಿ ಲಲಿತಮ್ಮ, ರಾಘವನ್, ಅಶ್ಚಿನಿ ಸ್ಪಿನ್‌ಕೃಷ್ಣ, ಶ್ವೇತಾ, ರಾಧ, ಸೇರಿದಂತೆ ವೈಷ್ಣವ ಸಂಘದ ಪದಾಧಿಕಾರಿಗಳು, ಸದಸ್ಯರು, ಸಮಾಜದ ಬಂಧುಗಳು ಹಾಜರಿದ್ದರು.