ಮಂಡ್ಯ: ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಮಾರ್ಚ್ ೨೧ ರಂದು ಶ್ರೀ ವೈರಮುಡಿ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಸಕಲ ಸಿದ್ಧತೆ ನಡೆಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು. ಶ್ರೀ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ ೧೬ ರಿಂದ ೨೬ ರವರೆಗೆ ನಡೆಯಲಿದ್ದು, ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ವ್ಯವಸ್ಥೆಗಳಾದ ಶುದ್ಧ ಕುಡಿಯುವ ನೀರು, ಅಗತ್ಯವಿರುವ ಸ್ಥಳಗಳಲ್ಲಿ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದರು.
ವಾಹನ ಪಾರ್ಕಿಂಗ್ ಗಾಗಿ ಸ್ಥಳ ಗುರುತಿಸಿ ಸಮತಟ್ಟು ಮಾಡಬೇಕು. ವಾಹನ ಪಾರ್ಕಿಂಗ್ ಸ್ಥಳದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿ. ಸುಗಮ ವಾಹನ ಸಂಚಾರಕ್ಕಾಗಿ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಅಗತ್ಯವಿರುವ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಿ ಎಂದರು. ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ. ದೇವಸ್ಥಾನದ ಸುತ್ತ ದೀಪಾಲಂಕಾರದ ವ್ಯವಸ್ಥೆ ಮಾಡುವಂತೆ ತಿಳಿಸಿದರು. ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಸ್ವಾಗತ, ಆಹಾರ ಆರೋಗ್ಯ, ಸ್ವಚ್ಛತೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲಸಗಳನ್ನು ವಹಿಸಿ ಎಂದರು.
ಮಾರ್ಚ್ ೧೬ ರಂದು ಶ್ರೀವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ, ೧೭ರಂದು ಕಲ್ಯಾಣೋತ್ಸವ ಧಾರಾಮಹೋತ್ಸವ- ಅದಿವಾಸರ- ರಕ್ಷಾಬಂಧನ- ಧ್ವಜಪ್ರತಿಷ್ಟೆ, ೧೮ ರಂದು ೧ ನೇ ತಿರುನಾಳ್- ಧ್ವಜಾರೋಹಣ- ಭೇರೀತಾಡನ- ತಿರುಪ್ಪರೈ -ಹಂಸವಾಹನ- ಯಾಗಶಾಲಾಪ್ರವೇಶ, ೧೯ ರಂದು ೨ ನೇ ತಿರುನಾಳ್ ಶೇಷವಾಹನ ಪಡೆಯೇತ್ತ, ೨೦ ರಂದು ೩ ನೇ ತಿರುನಾಳ್- ನಾಗವಲ್ಲೀಮಹೋತ್ಸವ- ನರಂಧೋಳಿಕಾರೋಹಣ- ಚಂದ್ರಮಂಡಲವಾಹನ- ಪಡಿಯೇತ್ತ, ೨೧ ರಂದು ೪ ನೇ ತಿರುನಾಳ್ ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ -ಪಡಿಯೇತ್ತ, ೨೨ ರಂದು ೫ ನೇ ತಿರುನಾಳ್- ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, ೨೩ ರಂದು ೬ ನೇ ತಿರುನಾಳ್ – ಗಜೇಂದ್ರ ಮೋಕ್ಷ -ಆನೆವಸಂತ- ಕುದುರೆವಾಹನ- ಆನೆವಾಹನ -ವಿಶೇಷ ಪಡಿಯೇತ್ತ, ೨೪ ರಂದು ೭ನೇ ತಿರುನಾಳ್- ಪೊಂಗುನ್ಯೂತ್ತರಮ್- ಶ್ರೀ ಮನ್ಮಹಾರೋಥೋತ್ಸವ, ೨೫ ರಂದು ೮ನೇ ತಿರುನಾಳ್- ತೆಪ್ಪೋತ್ಸವ- ಡೋಲೋತ್ಸವ- ಕುದುರೆ ವಾಹನ- ಕಳ್ಳರಸುಲಿಗೆ, ೨೬ ರಂದು ೯ನೇ ತಿರುನಾಳ್- ಸಂಧಾನಸೇವೆ -ಚೂರ್ಣಅಭಿಷೆ?ಕ- ಅವಬೃಥ – ಪಟ್ಟಾಭಿಷೇಕ -ಪುಷ್ಫಮಂಟಪರೋಹಣ- ಸಮರಭೂಪಾಲವಾಹನ- ಪಡಿಮಾಲೆ – ಪೂರ್ಣಾಹುತಿ, ೨೭ ರಂದು ೧೦ ನೇ ತಿರುನಾಳ್ -ಶ್ರೀ ನಾರಾಯಣ ಸ್ವಾಮಿಗೆ ಮಹಾಭಿಷೆಕ -ಪುಷ್ಪಯಾಗ- ಕತ್ತಲುಪ್ರದಕ್ಷಣೆ- ಹನುಮಂತವಾಹನ- ಉದ್ವಾಸನಪ್ರಬಂಧ, ೨೮ ರಂದು ಶ್ರೀ ಅಮ್ಮನವರಿಗೆ ಶ್ರೀಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ -ಕೊಡೈತಿರುನಾಳ್ ಉತ್ಸವ ಪ್ರಾರಂಭ ಕಾರ್ಯಕ್ರಮಗಳು ನಡೆಯಲಿದೆ.