ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ : ಫೆಬ್ರವರಿ 1 ಶನಿವಾರoದು ಶ್ರೀ ವೀರ ಮಡಿವಾಳ ಮಾಚಿದೇವರ ಜಯಂತಿ ಹಾಗೂ ಶ್ರೀ ವೀರ ಮಡಿವಾಳ ಮಾಚಿದೇವರ ಸಮುದಾಯ ಭವನದ ಗುದ್ದಲಿ ಪೂಜೆ ಮತ್ತು ಸಂಘದ ನಾಮಫಲಕ ಅನಾವರಣ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು ಪಟ್ಟಣದ ಜೂನಿಯರ್ ಕಾಲೇಜ್ ನಿಂದ ಬೆಳ್ಳಿ ರಥ ಮಂಗಳವಾದ್ಯ ವೀರಗಾಸೆ ಒಂದಿಗೆ ಶ್ರೀ ವೀರ ಮಡಿವಾಳ ಮಾಚಿದೇವ ಭಾವಚಿತ್ರ ಮೆರವಣಿಗೆ ಮೂಲಕ ಹೊರಟು ಶ್ರೀ ಯಲ್ಲಮ್ಮ ತಾಯಿ ದೇವಸ್ಥಾನದ ಹಿಂಭಾಗ ಬೃಹತ್ ವೇದಿಕೆಯಲ್ಲಿ ತಾಲೂಕಿನ ಜನಪ್ರಿಯ ಶಾಸಕರಾದ ಅನಿಲ್ ಚಿಕ್ಕಮಾದು ಉದ್ಘಾಟಿಸಲಿದ್ದು ಹಾಗೂ ಈ ಕಾರ್ಯಕ್ರಮಕ್ಕೆ ಸಂಸದ ಸುನೀಲ್ ಬೋಸ್, ತಹಸಿಲ್ದಾರ್ ಶ್ರೀನಿವಾಸ್, ಪುರಸಭೆ ಮುಖ್ಯ ಅಧಿಕಾರಿ ಪಿ ಸುರೇಶ್, ಇ ಓ, ಧರಣೇಶ್, ಶಬ್ಬೀರ್ ಹುಸೇನ್, ಶಶಿಕಲಾ, ಮತ್ತು ಮುಖಂಡರು ಆಗಮಿಸಲಿದ್ದು ಸಮಾಜದ ಬಂಧುಗಳು ಮತ್ತು ಎಲ್ಲಾ ಸಮಾಜದ ಮುಖಂಡರು ಅಧ್ಯಕ್ಷರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಅಧ್ಯಕ್ಷರಾದ ಮಹೇಶ್ ಮತ್ತು ಎಸ್. ಬಿ ಧರಣೇಶ್ ತಿಳಿಸಿದರು.