Thursday, April 17, 2025
Google search engine

Homeಬ್ರೇಕಿಂಗ್ ನ್ಯೂಸ್ಉದ್ಯೋಗಶ್ರೀನಿಧಿ ಸಹಕಾರಿ ಬ್ಯಾಂಕ್ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

ಶ್ರೀನಿಧಿ ಸಹಕಾರಿ ಬ್ಯಾಂಕ್ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

ಬೆಂಗಳೂರು: ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 17 ಜುಲೈ 2023 ಕೊನೆಯ ದಿನವಾಗಿದೆ.

ಜ್ಯೂನಿಯರ್ ಅಸಿಸ್ಟೆಂಟ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ನಗರದಲ್ಲಿ ಕೆಲಸ ಮಾಡಬೇಕಿದೆ. ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಬ್ರಾಂಚ್ ಮ್ಯಾನೇಜರ್/ ಡೆಪ್ಯೂಟಿ ಮ್ಯಾನೇಜರ್/ ಅಕೌಂಟೆಟ್ 3, ಕಂಪ್ಯೂಟರ್ ಪ್ರೊಗ್ರಾಮರ್ & ಡಿ. ಬಿ. ಎ 1, ಅಸಿಸ್ಟೆಂಟ್ ಮ್ಯಾನೇಜರ್/ ಅಸಿಸ್ಟೆಂಟ್ ಅಕೌಟೆಂಟ್/ ಫೀಲ್ಡ್ ಆಫೀಸರ್/ ಕಲೆಕ್ಟರ್/ ಅಸಿಸ್ಟೆಂಟ್ ಡಿ. ಬಿ. ಎ 5 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಸೀನಿಯರ್ ಅಸಿಸ್ಟೆಂಟ್ಸ್/ ಸೀನಿಯರ್ ಡೇಟಾ ಎಂಟ್ರಿ ಆಪರೇಟರ್ 2, ಜ್ಯುನಿಯರ್ ಅಸಿಸ್ಟೆಂಟ್/ ಕ್ಲರ್ಕ್/ ಟೈಪಿಸ್ಟ್/ ಡೇಟಾ ಎಂಟ್ರಿ ಆಪರೇಟರ್ 6, ಸರ್ವೆಂಟ್ಸ್/ ಜವಾನ/ ಸೆಕ್ಯುರಿಟಿ ಗಾರ್ಡ್/ ವಾಹನ ಚಾಲಕ 1 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ ನಿಯಮಗಳ ಅನ್ವಯ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಗರಿಷ್ಠ ವಯೋಮಿತಿ 35 ವರ್ಷಗಳು ಜುಲೈ 17, 2023ಕ್ಕೆ ಅನ್ವಯವಾಗುವಂತೆ. ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ಇರುತ್ತದೆ. ಸರ್ವೆಂಟ್ಸ್/ ಜವಾನ/ ಸೆಕ್ಯುರಿಟಿ ಗಾರ್ಡ್/ ವಾಹನ ಚಾಲಕ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು 177 ರೂ. ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಉಳಿದ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 354 ರೂ. ಶುಲ್ಕವನ್ನು ಪಾವತಿಸಬೇಕು.

ಡಿಡಿ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು ಎಂದು ಅಧಿಸೂಚನೆ ತಿಳಿಸಿದೆ. ಆಸಕ್ತ ಮತ್ತು ಅರ್ಹರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, Managing Director, Sreenidhi Souharda Sahakari Bank Niyamitha, Administrative Office, No. 113, R.V Road, V.V Puram, Bengaluru-560004 ವಿಳಾಸಕ್ಕೆ ಜುಲೈ 17ರೊಳಗೆ ತಲುಪುವಂತೆ ಕಳಿಸಬೇಕು. ಆಸಕ್ತ ಮತ್ತು ಅರ್ಹರು ಹೆಚ್ಚಿನ ಮಾಹಿತಿಗಾಗಿ https://sreenidhibank.com/ ವೆಬ್‌ಸೈಟ್‌ ವೀಕ್ಷಣೆ ಮಾಡಬಹುದು.

RELATED ARTICLES
- Advertisment -
Google search engine

Most Popular