ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದಲ್ಲಿ ಶ್ರೀನಿವಾಸ ಸ್ವಾಮಿ ದೇವರ ಬ್ರಹ್ಮರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನೆರವೇರಿತು.
ಶಾಸಕ ಡಿ.ರವಿಶಂಕರ್ ಶ್ರೀನಿವಾಸ ದೇವಾಯಲದಲ್ಲಿ ಪೂಜೆ ಸಲ್ಲಿದ ನಂತರ ಭಕ್ತಾದಿಗಳ ಸಮೂಹದ ಜೈಕಾರದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಹೋಮ-ಹವನ ಸೇರಿದಂತೆ ಧಾರ್ಮಿಕ ಕಾರ್ಯಗಳು ಜರುಗಿದವು.
ದೇವರಿಗೆ ವಿವಿಧ ಬಗೆಯ ಅಭಿಷೇಕ ನಡೆಸಿ ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಿದ ದೇವರ ಮೂರ್ತಿಯನ್ನು ಪ್ರಾಂಗಣದಲ್ಲಿ ಶೃಂಗರಿಸಿ ನಿಲ್ಲಿಸಲಾಗಿದ್ದ, ರಥಕ್ಕೆ ಶ್ರೀನಿವಾಸ ಸ್ವಾమి ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಅರ್ಚಕ ವೃಂದದಿಂದ ಧಾರ್ಮಿಕ విధి ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ನಂತರ ಭಕ್ತರ ಸಮ್ಮುಖದಲ್ಲಿ ದೇವರಿಗೆ ಮಹಾಮಂಗಳಾರತಿ ಮಾಡಿದ ಬಳಿಕ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತಾದಿಗಳು ಭಕ್ತಿಯಿಂದ ಜಯಕಾರ ಘೋಷಣೆಯೊಂದಿಗೆ ರಥವನ್ನು ಎಳೆದರು.
ಗ್ರಾಮದ ಮಹಿಳಾ ಭಕ್ತರು ರಥ ಬೀದಿ ಯನ್ನು ಸ್ವಚ್ಛಗೊಳಿಸಿ ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿದ ಬೀದಿಗೆ ಬರಮಾಡಿಕೊಂಡು ರಥಕ್ಕೆ ಹಣ್ಣು ಜವನ ಎಸೆಯುತ್ತ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹಣ್ಣು ಕಾಯಿ ನೀಡಿ ದೇವರಲ್ಲಿ ಶ್ರದ್ದಾ ಭಕ್ತಿಯಿಂದ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ್ ದೇವರ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ರಾವ್, ಬ್ರಾಹ್ಮಣ ಸಂಘದ ಅಧ್ಯಕ್ಷ ಕೇಶವಮೂರ್ತಿ ತಾ.ಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ಗ್ರಾ.ಪಂ.ಉಪಾಧ್ಯಕ್ಷೆ ರೂಪಲವ, ಮಾಜಿ ಅಧ್ಯಕ್ಷ ಕರಿಗೌಡ, ಗುಂಡುನವೀನ್, ಕಾಂಗ್ರೆಸ್ ಮುಖಂಡರಾದ ಎಂ.ಇ ನವೀನ್ ಕುಮಾರ್, ಮೆಡಿಕಲ್ರಾಮ ಕೃಷ್ಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಮಹೇಶ್ ಕುಮಾರ್, ನಿವೃತ್ತ ಪೊಲೀಸ್ ಸಿದ್ದಯ್ಯ, ಪರಮೇಶ್ ಸೊಸೈಟಿ ಮಾಜಿ ಅಧ್ಯಕ್ಷ ಪಾಂಡು, ಆಪ್ತಸಹಾಯ ನವೀನ್.ಪುನೀತ್ ಸೇರಿದಂತೆ ಮತ್ತಿತರರು ಇದ್ದರು.