Friday, April 11, 2025
Google search engine

Homeರಾಜಕೀಯಶ್ರೀರಾಮುಲು- ಜನಾರ್ಧನ್ ರೆಡ್ಡಿ ನಡುವೆ ಬಿರುಕು : ಸಂಧಾನಕ್ಕೆ ಪ್ರಹ್ಲಾದ್ ಜೋಶಿ ಗೆ ಜವಾಬ್ದಾರಿ ನೀಡಿದ...

ಶ್ರೀರಾಮುಲು- ಜನಾರ್ಧನ್ ರೆಡ್ಡಿ ನಡುವೆ ಬಿರುಕು : ಸಂಧಾನಕ್ಕೆ ಪ್ರಹ್ಲಾದ್ ಜೋಶಿ ಗೆ ಜವಾಬ್ದಾರಿ ನೀಡಿದ ಹೈಕಮಾಂಡ್

ಬೆಂಗಳೂರು : ಗಂಗಾವತಿ ಕ್ಷೇತ್ರದ ಶಾಸಕ ಜನಾರ್ಧನ ರೆಡ್ಡಿ ಹಾಗೂ ಬಿಜೆಪಿಯ ಮಾಜಿ ಸಚಿವ ಶ್ರೀರಾಮುಲು ನಡುವೆ ಇದೀಗ ಬಿರುಕು ಉಂಟಾಗಿದೆ. ಉಪಚುನಾವಣೆಯಲ್ಲಿ ಸೋಲಲು ಶ್ರೀರಾಮುಲು ಕಾರಣ ಎಂದು ಜನಾರ್ದನ ರೆಡ್ಡಿ ಇತ್ತೀಚಿಗೆ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದರು. ಬಳಿಕ ಜನಾರ್ಧನ ರೆಡ್ಡಿ ಕೂಡ ಶ್ರೀರಾಮುಲು ವಿರುದ್ಧ ಗಂಭೀರವಾದ ಆರೋಪ ಮಾಡಿದ್ದರು. ಇದೀಗ ಇವರಿಬ್ಬರ ನಡುವೆ ಸಂಧಾನ ನಡೆಸಲು ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಸಂಧಾನದ ಜವಾಬ್ದಾರಿ ನೀಡಿದೆ.

ಹೌದು ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು 30 ವರ್ಷಗಳ ಸ್ನೇಹದ ನಡುವೆ ಇದೀಗ ಬಿರುಕು ಉಂಟಾಗಿದೆ. ಹಾಗಾಗಿ ಇಬ್ಬರ ನಡುವೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪ್ರಹ್ಲಾದ ಜೋಶಿಗೆ ಹೈಕಮಾಂಡ್ ಇದೀಗ ಜವಾಬ್ದಾರಿ ವಹಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ರಾಮುಲು ಕರೆದುಕೊಂಡು ದೆಹಲಿಗೆ ಬರುವಂತೆ ಜೆಪಿ ನಡ್ಡಾ ಇದೀಗ ಸೂಚನೆ ನೀಡಿದ್ದಾರೆ. ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ನಡೆದ ವಿಚಾರವಾಗಿ, ಶ್ರೀರಾಮುಲು ಸಹಜವಾಗಿ ಆಕ್ರೋಶ ಹೊರ ಹಾಕಿದ್ದರು.

ಈ ವಿಚಾರವಾಗಿ ಈಗಾಗಲೇ ಮಾಜಿ ಸಚಿವ ಶ್ರೀರಾಮುಲು ಜೊತೆಗೆ ಜೆಪಿ ನಡ್ಡಾ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಶ್ರೀರಾಮುಲು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಕೋರ್ ಕಮಿಟಿ ಸಭೆಯಲ್ಲಿ ನಡೆದ ಘಟನಾವಳಿ ಬಗ್ಗೆ ಚರ್ಚೆ ಆಗಬಾರದು ಇಬ್ಬರು ಚರ್ಚೆ ಮಾಡದಂತೆ ನೋಡಿಕೊಳ್ಳಲು ಹೈಕಮಾಂಡ್ ಜೋಶಿ ಅವರಿಗೆ ಸೂಚನೆ ನೀಡಿದ್ದಾರೆ. ಮೊದಲು ಶ್ರೀರಾಮುಲು ಹಾಗೂ ನಂತರ ಜನಾರ್ದನ ರೆಡ್ಡಿಗೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದ್ದಾರೆ.

RELATED ARTICLES
- Advertisment -
Google search engine

Most Popular