ಶ್ರೀರಂಗಪಟ್ಟಣ : ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮನಹಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆದ ಲಕ್ಷಾಂತರ ರೂ. ಬೆಳೆಗಳನ್ನು ನಾಶ ಮಾಡಿವೆ.
ಮೊತ್ತಹಳ್ಳಿ ಗ್ರಾಮದ ಕುಮಾರ್ ಎಂಬುವರಿಗೆ ಸೇರಿದ ೩೦ ಕುಂಟೆ ಬೀನ್ಸ್, ಸುನಿಲ್ ಎಂಬುವರಿಗೆ ಸೇರಿದ ಒಂದುವರೆ ಎಕರೆ ಬಾಳೆ ತೋಟ ,ಪ್ರದೀಪ್ ಎಂಬುವರಿಗೆ ಸೇರಿದ ೩೦ ಕುಂಟೆ ಟಮೋಟ, ಕಟ್ಟೆ ಸಿದ್ದ ರವರಿಗೆ ಸೇರಿದ ೨೦ ಗುಂಟೆ ಕಬ್ಬು, ಕುಮಾರ್ ಎಂಬುವರಿಗೆ ಸೇರಿದ ಹಾಗಲಕಾಯಿ ಮಡಿಯನ್ನು ತುಳಿದು ಲಕ್ಷಾಂತರ ರೂಪಾಯಿ ನಷ್ಟ ಆಗುವಂತೆ ನಾಶ ಮಾಡಿವೆ.

ಬೆಳೆ ನಷ್ಟ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ರೈತರು ಮನವಿ ಮಾಡಿದ್ದಾರೆ, ಮತ್ತೊಂದು ಕಡೆ ಕಾಡಾನೆ ದಾಳಿ ಮಾಡುವ ಬಗ್ಗೆ ರೈತರಲ್ಲಿ ಆತಂಕ ಮನೆ ಮಾಡಿದೆ. ನಾಲ್ಕೈದು ತಿಂಗಳ ಹಿಂದೆ ಈ ಭಾಗದಲ್ಲಿ ಕಾಡಾನೆಯೊಂದು ರೈತ ಮಹಿಳೆಯನ್ನು ತುಳಿದು ಸಾಯಿಸಿತ್ತು. ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ.