ಮಂಡ್ಯ: ಇಂದು ಭೀಮನ ಅಮವಾಸ್ಯೆ ಹಿನ್ನಲೆ ಶ್ರೀರಂಗಪಟ್ಟಣದಲ್ಲಿನ ಶಕ್ತಿ ದೇವತೆಗಳ ದೇಗುಲಕ್ಕೆ ಭಕ್ತರ ದಂಡು ಹರಿದು ಬಂದಿದೆ.
ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಿಮಿಷಾಂಭ ದೇಗುಲ, ಆರತಿ ಉಕ್ಕಡದ ಅಲಹ್ಯ ದೇವಿ ದೇಗುಲ, ಹಾಗು ಟಿ.ಎಂ. ಹೊಸೂರು ಮಹಾ ಕಾಳಿ ದೇಗುಲಕ್ಕೆ ಭಕ್ತರು ಲಗ್ಗೆ ಇಟ್ಟಿದ್ದಾರೆ.
ಭೀಮನ ಅಮಾವಾಸ್ಯೆ ಕಾರಣ ಶಕ್ತಿ ದೇವತಗೆ ಭಕ್ತರಿಂದ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ಆರತಿ ಉಕ್ಕಡ ಹಾಗೂ ಕಾಳಿ ದೇಗುಲದಲ್ಲಿ ತಡೆ ಒಡೆಸಿ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
