ಅ-03 ರಿಂದ ಅ-08 ರವರೆಗೆ ಪ್ರಾಯೋಗಿಕವಾಗಿ 5 ದಿನ ಕಾವೇರಿ ಆರತಿ ಪೂಜೆ
ಮಂಡ್ಯ: ಶ್ರೀರಂಗಪಟ್ಟಣ ದಸರೆಗೂ ಮುನ್ನವೇ ಕಾವೇರಿ ನದಿ ಆರತಿ ಪೂಜೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದ ಬಳಿಯ ಸ್ನಾನಘಟ್ಟದಲ್ಲಿ ಕಾವೇರಿ ಆರತಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಅ-03 ರಿಂದ ಅ-08 ರವರೆಗೆ ಪ್ರಾಯೋಗಿಕವಾಗಿ 5 ದಿನ ಕಾವೇರಿ ಆರತಿ ಪೂಜೆ ಸಿದ್ಧತೆಗಳು ಭರದಿಂದ ಸಾಗಿದೆ. ಶ್ರೀರಂಗಪಟ್ಟಣದ ಪ್ರಸಿದ್ದ ಅರ್ಚಕ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕಾವೇರಿ ಆರತಿ ಪೂಜಾ ಕೈಂಕರ್ಯಗೊಳ್ಳಲಿದ್ದು ಕಾವೇರಿ ಆರತಿಗಾಗಿ ಪಟ್ಟಣದ ಸ್ನಾನಘಟ್ಟದ ಬಳಿ ಭರದಿಂದ ಸಿದ್ಧತೆ ಕಾರ್ಯಗಳು ಜರುಗುತ್ತಿವೆ.
ಸ್ನಾನಘಟ್ಟದ ಬಳಿ ಕಟ್ಟಡಗಳು ಮತ್ತು ದೇಗುಲಕ್ಕೆ ಸುಣ್ಣ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ರಾತ್ರಿ ವೇಳೆ ಆರತಿ ಪೂಜಾ ಕಾರ್ಯಕ್ಕಾಗಿ ಸ್ಥಳದಲ್ಲಿ ಬೆಳಕಿಗಾಗಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುತ್ತಿದೆ. ಅಕ್ಟೋಬರ್ 3 ಸಂಜೆ 6:15 ರಿಂದ ರಾತ್ರಿ 7 ಗಂಟೆಯವರೆಗೂ ಆರತಿಗೆ ಸಮಯ ನಿಗದಿ ಮಾಡಲಾಗಿದ್ದು, ಪ್ರಾಯೋಗಿಕ ಕಾವೇರಿ ಆರತಿ ಯಶಸ್ಸು ಕಂಡರೆ ಗಂಗಾರತಿ ರೀತಿ ಪ್ರತಿದಿನ ಮುಂದುವರಿಸಲು ಚಿಂತನೆ ನಡೆಸಲಾಗುತ್ತಿದೆ.