Tuesday, April 15, 2025
Google search engine

Homeರಾಜ್ಯಸುದ್ದಿಜಾಲಶ್ರೀಶೈಲ: ಶ್ರಾವಣಮಾಸದ ದಿನಗಳಲ್ಲಿ ಆರ್ಜಿತ ಅಭಿಷೇಕಗಳ ಸ್ಥಗಿತ

ಶ್ರೀಶೈಲ: ಶ್ರಾವಣಮಾಸದ ದಿನಗಳಲ್ಲಿ ಆರ್ಜಿತ ಅಭಿಷೇಕಗಳ ಸ್ಥಗಿತ

ಬಳ್ಳಾರಿ: ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಶ್ರೀಶೈಲಂನ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಗಸ್ಟ್ 17 ರಿಂದ ಸೆಪ್ಟೆಂಬರ್ 15ರ ವರೆಗಿನ ಶ್ರಾವಣ ಮಾಸದ ಹಬ್ಬ ಮತ್ತು ರಜಾ ದಿನಗಳಲ್ಲಿ ಶ್ರೀ ಸ್ವಾಮಿಯ ಗರ್ಭಗುಡಿ ಆರ್ಜಿತ ಅಭಿಷೇಕ ಹಾಗೂ ಸಾಮೂಹಿಕ ಆರ್ಜಿತ ಅಭಿಷೇಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಡೆಪ್ಯುಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಲವನ್ನ ಅವರು ತಿಳಿಸಿದ್ದಾರೆ.
ಶ್ರಾವಣಮಾಸೋತ್ಸವದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ಶ್ರಾವಣ ಮಾಸದ ಶ್ರಾವಣಮಾಸೋತ್ಸವಗಳನ್ನು ಅಂದರೆ ಆಗಸ್ಟ್ 17 ರಿಂದ ಸೆಪ್ಟೆಂಬರ್ 15ರ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ಶ್ರಾವಣ ಮಾಸದಲ್ಲಿ ಶನಿವಾರ, ಭಾನುವಾರ, ಸೋಮವಾರ, ಸ್ವಾತಂತ್ರ್ಯ ದಿನ(ಆ.15), ವರಲಕ್ಷ್ಮಿವ್ರತ(ಆ.25), ಶ್ರಾವಣಪೌರ್ಣಮಿ(ಆ.31), ಶ್ರೀ ಕೃಷ್ಣಾಷ್ಟಮಿ(ಸೆ.06) ಮುಂತಾದ ದಿನಗಳಲ್ಲಿ ಗರ್ಭಗುಡಿ ಆರ್ಜಿತ ಅಭಿಷೇಕಗಳು ಮತ್ತು ಸಾಮುದಾಯಿಕ ಅಭಿಷೇಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.
ಶ್ರಾವಣ ಮಾಸದ ಇನ್ನುಳಿದ ದಿನಗಳಲ್ಲಿ, ಸರ್ವದರ್ಶನದ ಜೊತೆಗೆ (ಉಚಿತ ಅಲಂಕಾರಿಕ ದರ್ಶನದ ಜೊತೆಗೆ), ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನವನ್ನು ಸಹ ನಾಲ್ಕು ಕಂತುಗಳಲ್ಲಿ ಒದಗಿಸಲಾಗುತ್ತದೆ.
ಭಕ್ತರು ಸ್ಪರ್ಶ ದರ್ಶನಕ್ಕಾಗಿ ರೂ.500/- ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಮೇಲಿನ ನಿಗದಿತ ದಿನಗಳನ್ನು ಹೊರತುಪಡಿಸಿ ಶ್ರಾವಣ ಮಾಸದ ಇತರ ದಿನಗಳಲ್ಲಿ ಶ್ರೀ ಸ್ವಾಮಿಯವರಿಗೆ ಅಭಿಷೇಕಗಳು ಎಂದಿನಂತೆ ನಡೆಯಲಿವೆ ಎಂದು ತಿಳಿಸಿದ್ದಾರೆ.
ಈ ನಿರ್ದಿಷ್ಟ ದಿನಗಳನ್ನು ಹೊರತುಪಡಿಸಿ, ಸಾಮಾನ್ಯ ದಿನಗಳಲ್ಲಿ ಅಂದರೆ ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ರಿಂದ ನೀಡಲಾಗುವ ಉಚಿತ ಸ್ಪರ್ಶ ದರ್ಶನ ಎಂದಿನಂತೆ ಮುಂದುವರಿಯಲಿದೆ.
ಆದರೆ ಇಂದಿನ ದಿನಗಳಲ್ಲಿ ಉಚಿತ ಸ್ಪರ್ಶ ದರ್ಶನಕ್ಕೆ ಬರುವ ಭಕ್ತರು ಮಧ್ಯಾಹ್ನ 1.30 ರೊಳಗೆ ಸರತಿ(ಕ್ಯೂ) ಕಾಂಪ್ಲೆಕ್ಸ್‍ನಲ್ಲಿ ಆಗಮಿಸುವುದು ಕಡ್ಡಾಯ. ಭಕ್ತರು ಆರ್ಜಿತ ಅಭಿಷೇಕಗಳು, ಕುಂಕುಮಾರ್ಚನೆಗಳು, ಹೋಮಗಳು, ಶ್ರೀಸ್ವಾಮಿ ಅಮ್ಮನವರ ಕಲ್ಯಾಣೋತ್ಸವ ಇತ್ಯಾದಿ ಆರ್ಜಿತಸೇವಾ ಟಿಕೆಟ್‍ಗಳನ್ನು ಹಾಗೂ ಶ್ರೀಸ್ವಾಮಿಯ ಸ್ಪರ್ಶದರ್ಶನದ ಟಿಕೆಟ್‍ಗಳನ್ನು ದೇವಸ್ಥಾನದ ಅಧಿಕೃತ ವೆಬ್‍ಸೈಟ್‍ನಿಂದ ಮಾತ್ರ ಪಡೆಯಬೇಕು. ಪ್ರಸ್ತುತ ಬುಕಿಂಗ್ ಮೂಲಕ ಈ ಟಿಕೆಟ್‍ಗಳು ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಭಕ್ತರು ಆಯಾ ಟಿಕೆಟ್‍ಗಳನ್ನು ದೇವಸ್ಥಾನದ ವೆಬ್‍ಸೈಟ್ www.srisailadevasthanam.org ಮೂಲಕ ಮುಂಗಡವಾಗಿ ಪಡೆಯಬಹುದು. ಆಗಸ್ಟ್ ತಿಂಗಳ ಟಿಕೆಟ್ ಕೋಟಾವನ್ನು ಈಗಾಗಲೇ ದೇವಸ್ಥಾನದ ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಅದರಂತೆಯೇ, ಸೆಪ್ಟೆಂಬರ್ ತಿಂಗಳ ಟಿಕೆಟ್‍ಗಳ ಕೋಟಾ ಆಗಸ್ಟ್ 25 ರಿಂದ ಲಭ್ಯವಿರುತ್ತದೆ.
ಟಿಕೆಟ್‍ಗಳ ಲಭ್ಯತೆಯ ಆಧಾರದ ಮೇಲೆ ಪ್ರಾರಂಭದ ಸಮಯಕ್ಕಿಂತ ಒಂದು ಗಂಟೆ ಮೊದಲು ಆನ್‍ಲೈನ್‍ನಲ್ಲಿ ಟಿಕೆಟ್‍ಗಳನ್ನು ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶದರ್ಶನ ಚೀಟಿದಾರರು ಟಿಕೆಟ್ ಪ್ರತಿ (ಹಾರ್ಡ್ ಕಾಪಿ) ಮತ್ತು ಆಧಾರ್ ಕಾರ್ಡ್‍ನ ಮೂಲ ಅಥವಾ ಜೆರಾಕ್ಸ್ ಪ್ರತಿಯನ್ನು ತರಬೇಕು. ಆಯಾ ಸೇವಾ ಟಿಕೆಟ್‍ಗಳನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಆಧಾರ್ ಗುರುತಿನ ಚೀಟಿಯೊಂದಿಗೆ ಆಯಾ ಟಿಕೆಟ್‍ಗಳನ್ನು ಪರಿಶೀಲಿಸಿದ ನಂತರ, ಭಕ್ತರಿಗೆ ಆಯಾ ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ.
ಆದರೆ ರೂ.150/- ತ್ವರಿತ ದರ್ಶನಕ್ಕೆ (ಶ್ರೀ ಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಮತ್ತು ರೂ.300/- ಅತಿತ್ವರಿತ ದರ್ಶನ ಟಿಕೆಟ್‍ಗಳನ್ನು (ಶ್ರೀಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಆನ್‍ಲೈನ್ ಮತ್ತು ಕರೆಂಟ್ ಬುಕಿಂಗ್ ಮೂಲಕ ಪಡೆಯಬಹುದು. ಈ ಪೈಕಿ ಶೇ.30ರಷ್ಟು ಟಿಕೆಟ್‍ಗಳನ್ನು ಆನ್‍ಲೈನ್‍ನಲ್ಲಿ ನೀಡಲಾಗಿದ್ದು, ಶೇ.70ರಷ್ಟು ಟಿಕೆಟ್‍ಗಳನ್ನು ಕರೆಂಟ್ ಬುಕ್ಕಿಂಗ್ ಮೂಲಕ ನೀಡಲಾಗುತ್ತದೆ.
ಆದ್ದರಿಂದ ಆರ್ಜಿತ ಸೇವೆಗಳನ್ನು ಮಾಡುವ ಭಕ್ತರು ತಮ್ಮ ಶ್ರೀಶೈಲಯಾತ್ರೆಯನ್ನು ಆರ್ಜಿತ ಸೇವೆಗಳು ಮತ್ತು ಸ್ಪರ್ಶ ದರ್ಶನದ ಟಿಕೆಟ್‍ಗಳ ಲಭ್ಯತೆಗೆ ಅನುಗುಣವಾಗಿ ಯೋಜಿಸಿಕೊಳ್ಳಬೇಕು ಎಂದು ಡೆಪ್ಯುಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಲವನ್ನ ಅವರು ತಿಳಿಸಿದ್ದಾರೆ.

ಶ್ರೀಶೈಲಂ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ. ಎಸ್.ಲವನ್ನ
RELATED ARTICLES
- Advertisment -
Google search engine

Most Popular