Friday, April 11, 2025
Google search engine

Homeರಾಜ್ಯಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.

ಇಂದು ಪ್ರಕಟವಾದ ಅಂತಿಮ ವೇಳಾಪಟ್ಟಿ ಪ್ರಕಟ ಪ್ರಕಾರ, ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ಎಸ್ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ.

ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ.

ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 25: ಪ್ರಥಮ ಭಾಷೆ
ಮಾರ್ಚ್ 27: ಸಮಾಜ ವಿಜ್ಞಾನ
ಮಾರ್ಚ್ 30: ವಿಜ್ಞಾನ
ಏಪ್ರಿಲ್ 2 : ಗಣಿತ
ಏಪ್ರಿಲ್ 4: ತೃತೀಯ ಭಾಷೆ
ಏಪ್ರಿಲ್ 6: ದ್ವೀತಿಯ ಭಾಷೆ

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 1: ಕನ್ನಡ, ಅರೇಬಿಕ್
ಮಾರ್ಚ್ 4: ಗಣಿತ, ಶಿಕ್ಷಣ ಶಾಸ್ತ್ರ
ಮಾರ್ಚ್ 5: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾರ್ಚ್ 6: ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್, ಆಟೋ ಮೊಬೈಲ್
ಮಾರ್ಚ್ 7: ಇತಿಹಾಸ, ಭೌತಶಾಸ್ತ್ರ
ಮಾರ್ಚ್ 9: ಐಚ್ಛಿಕ ಕನ್ನಡ, ಲೆಕ್ಕಾಶಾಸ್ತ್ರ,ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 11: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 13: ಇಂಗ್ಲಿಷ್
ಮಾರ್ಚ್ 15: ಹಿಂದೂಸ್ತಾನಿ ಸಂಗೀತ,ಮನಃಶಾಸ್ತ್ರ,ರಸಾಯನಶಾಸ್ತ್ರ, ಮೂಲ ಗಣಿತ
ಮಾರ್ಚ್ 16: ಅರ್ಥಶಾಸ್ತ್ರ
ಮಾರ್ಚ್ 18: ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮಾರ್ಚ್ 20: ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 21: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 22: ಹಿಂದಿ

RELATED ARTICLES
- Advertisment -
Google search engine

Most Popular