Monday, May 5, 2025
Google search engine

Homeರಾಜ್ಯಸುದ್ದಿಜಾಲಎಸ್‌ಎಸ್‌ಎಲ್‌ಸಿ ಪರೀಕ್ಷೆ:ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಗೆ ಶೇ.೬೪.೫೮ ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ:ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಗೆ ಶೇ.೬೪.೫೮ ಫಲಿತಾಂಶ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಗೆ ಶೇ.೬೪.೫೮ ಫಲಿತಾಂಶ ಬಂದಿದೆ ಎಂದು ಬಿಇಒ ಆರ್.ಕೃಷ್ಣಪ್ಪ ಹೇಳಿದರು.

ಕೆ.ಅರ್.ನಗರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರೀಕ್ಷೆಗೆ ಹಾಜರಾಗಿದ್ದ ೨೮೨೬ ವಿದ್ಯಾರ್ಥಿಗಳ ಪೈಕಿ ೧೮೨೫ ಮಂದಿ ಉತ್ತೀರ್ಣರಾಗಿದ್ದು ೧೦೦೧ ಮಂದಿ ಅನುತ್ತೀರ್ಣರಾಗಿದ್ದಾರೆ. ಈ ಪೈಕಿ ಪರೀಕ್ಷೆಗೆ ಹಾಜರಾಗಿದ್ದ ೧೩೦೩ ಬಾಲಕರಲ್ಲಿ ೭೨೫ ಮಂದಿ ಉತ್ತೀರ್ಣರಾಗಿದ್ದು ಶೇ.೫೫.೬೪% ಫಲಿತಾಂಶ ಹಾಗೂ ಪರೀಕ್ಷೆಗೆ ಕುಳಿತ್ತಿದ್ದ ೧೪೨೯ ಬಾಲಕಿಯರಲ್ಲಿ ೧೦೯೭ ಮಂದಿ ಉತ್ತೀರ್ಣರಾಗಿ ಶೇ.೭೬.೭೭% ಫಲಿತಾಂಶದೊAದಿಗೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆಂದು ತಿಳಿಸಿದರು.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ್ದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ೧೯೦೬ ವಿದ್ಯಾರ್ಥಿಗಳ ಪೈಕಿ ೧೨೩೨ ಮಂದಿ ಉತ್ತೀರ್ಣರಾಗಿದ್ದಾರಲ್ಲದೆ ಇವರೊಂದಿಗೆ ನಗರದ ವ್ಯಾಪ್ತಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೮೨೬ ವಿದ್ಯಾರ್ಥಿಗಳಲ್ಲಿ ೫೯೦ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೆ.ಆರ್.ನಗರದ ಬಿ.ಎಸ್.ಮಾದಪ್ಪ ಪ್ರೌಢಶಾಲೆ, ಸಾಲಿಗ್ರಾಮ ತಾಲೂಕಿನ ಕುಪ್ಪಳ್ಳಿ ಗ್ರಾಮದ ಇಂದಿರಾಗಾ0ಧಿ ವಸತಿ ಶಾಲೆ ಮತ್ತು ಮಿರ್ಲೆ ಮಿಥಿಲಾ ಪ್ರೌಢಶಾಲೆಗಳು ಶೇ.೧೦೦% ಫಲಿತಾಂಶ ಗಳಿಸಿವೆ ಎಂದು ಹೇಳಿದರು.

೬೨೫ ಅಂಕಗಳಿಗೆ ಪಟ್ಟಣದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಆರ್.ಪ್ರಣತಿ ೬೨೧, ಬಿ.ಎಸ್.ಮಾದಪ್ಪ ವಿದ್ಯಾ ಸಂಸ್ಥೆಯ ಬಿ.ಜಿ.ಚಂದನ್ ೬೨೦, ಕಾಳೇನಹಳ್ಳಿ ಆದರ್ಶ ಶಾಲೆಯ ವಿದ್ಯಾರ್ಥಿನಿ ನಮ್ರತಾಬಾಯಿ ೬೧೭, ಕಾರ್ತಿಕ್‌ರಾಜ್ ೬೧೨, ಜಿ.ಆರ್.ಸಹನ ೬೧೨, ಸಾಲಿಗ್ರಾಮ ಶಾರದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮನೋಜ್ಞ ೬೧೪ ಅಂಕ ಗಳಿಸಿ ಶಾಲೆಗಳಿಗೆ ಕೀರ್ತಿ ತಂದಿದ್ದಾರೆ ಎಂದರು.

೬೨೫ಕ್ಕೆ ೬೨೧ ಅಂಕಗಳಿಸಿರುವ ಕೆ.ಆರ್.ಪ್ರಣತಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಗೆ ಮೊದಲಿಗಳಾಗಿದ್ದಾಳೆ, ಕಳೆದ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ನಮ್ಮ ತಾಲೂಕುಗಳು ಈ ಬಾರಿ ಐದನೇ ಸ್ಥಾನ ಗಳಿಸಿದ್ದು ಶಾಸಕರಾದ ಡಿ.ರವಿಶಂಕರ್ ಅವರ ಮಾರ್ಗದರ್ಶ ಮತ್ತು ಶಿಕ್ಷಕರ ಸತತ ಪರಿಶ್ರಮದಿಂದ ನಾವು ಈ ಫಲಿತಾಂಶ ಪಡೆಯಲು ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಮೊದಲ ಸ್ಥಾನಕ್ಕೇರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಸಿಆರ್‌ಪಿ ವಸಂತ್‌ಕುಮಾರ್, ಶಿಕ್ಷಣ ಸಂಯೋಜಕಿ ಪೂರ್ಣಿಮ, ದೈಹಿಕ ಪರಿವೀಕ್ಷಕ ಎಂ.ಪಿ.ಕುಮಾರಸ್ವಾಮಿ, ಸಿಬ್ಬಂದಿಗಳಾದ ಧನಂಜಯ್, ಲೋಕೇಶ್, ಲಕ್ಷö್ಮಣೇಗೌಡ ಮತ್ತಿತರರು ಹಾಜರಿದ್ದರು.

“ಬಿಇಓ ಕೃಷ್ಣಪ್ಪ- ಪ್ರೌಢಶಾಲಾ ಶಿಕ್ಷಕರಿಗೆ ಅಭಿನಂದನೆ”

ಕೃಷ್ಣರಾಜನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಎಸ್‌ ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 67 ರಷ್ಟು ಉತ್ತಮ ಫಲಿತಾಂಶ ಹಾಗೂ ಜಿಲ್ಲೆಯಲ್ಲಿ 05 ನೇ ಸ್ಥಾನ ಬಂದಿದ್ದು, ಅದಕ್ಕೆ ಕಾರಣಕರ್ತರಾದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಕೃಷ್ಣಪ್ಪ ರವರಿಗೆ,ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ, ಸಹಶಿಕ್ಷಕರಿಗೆ,ಪೋಷಕರಿಗೆ,ಮತ್ತು ಶಾಲಾ ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆವೆ.

ವಸಂತಕುಮಾರ.ಎಸ್.
ಅಧ್ಯಕ್ಷರು.
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ನೌಕರರ ಸಂಘ (ರಿ)
ಕೃಷ್ಣರಾಜನಗರ.

RELATED ARTICLES
- Advertisment -
Google search engine

Most Popular