Monday, April 21, 2025
Google search engine

Homeಸ್ಥಳೀಯಎಸ್ ಎಸ್ ಎಲ್ ಸಿ ಫಲಿತಾಂಶ: ವಿಜಯ ವಿಠಲ ವಿದ್ಯಾ ಶಾಲೆ ಜಿಲ್ಲೆಗೆ ನಾಲ್ಕನೇ ಸ್ಥಾನ

ಎಸ್ ಎಸ್ ಎಲ್ ಸಿ ಫಲಿತಾಂಶ: ವಿಜಯ ವಿಠಲ ವಿದ್ಯಾ ಶಾಲೆ ಜಿಲ್ಲೆಗೆ ನಾಲ್ಕನೇ ಸ್ಥಾನ

ಮೈಸೂರು: ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ನಗರದ ವಿಜಯ ವಿಠಲ ವಿದ್ಯಾಶಾಲೆಯ ವಿದ್ಯಾರ್ಥಿ ಪ್ರಥಮ್.ಎಸ್. ಭಾರಧ್ವಾಜ್ ೬೨೫ ಕ್ಕೆ ೬೨೨ಅಂಕಗಳನ್ನು ತೆಗೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು, ಸುದೀಪ್ತ ೬೨೫ಕ್ಕೆ ೬೨೧ ಅಂಕವನ್ನು ಪಡೆದು ಜಿಲ್ಲೆಗೆ ತೃತೀಯ ಸ್ಥಾನವನ್ನು, ಸುದೀಕ್ಷಾ ಎಂ.ಡಿ ೬೨೫ ಕ್ಕೆ ೬೨೦ ಅಂಕಗಳನ್ನು ಪಡೆದು ಜಿಲ್ಲೆಗೆ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಶಾಲೆಯ ಕಿರೀಟವನ್ನು ಉನ್ನತ ಶಿಖರಕ್ಕೇರಿಸಿದ್ದಾರೆ.

ಎಸ್. ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದ ೧೫೧ ವಿದ್ಯಾರ್ಥಿಗಳಲ್ಲಿ ೭೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಪ್ರಥಮ ಭಾಷೆಯಲ್ಲಿ ೧೨೫ ಕ್ಕೆ ೧೨೫ ಅಂಕಗಳನ್ನು ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ೧೪ ವಿದ್ಯಾರ್ಥಿಗಳು, ದ್ವಿತೀಯ ಭಾಷೆ ಇಂಗ್ಲಿಷ್‌ಲ್ಲಿ ೬ ವಿದ್ಯಾರ್ಥಿಗಳು, ತೃತೀಯ ಭಾಷೆ ಕನ್ನಡ ಮತ್ತು ಹಿಂದಿಯಲ್ಲಿ ೧೬ ವಿದ್ಯಾರ್ಥಿಗಳು,ಗಣಿತ ವಿಷಯದಲ್ಲಿ ೨ ವಿದ್ಯಾರ್ಥಿಗಳು, ವಿಜ್ಞಾನ ವಿಷಯದಲ್ಲಿ ೨ ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ವಿಷಯದಲ್ಲಿ ೫ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಮುಖ್ಯಶಿಕ್ಷಕರು,ಪೋಷಕರು, ಶಿಕ್ಷಕರು,ಸಿಬ್ಬಂದಿ ವರ್ಗ ಪ್ರಶಂಸಿದರು.

RELATED ARTICLES
- Advertisment -
Google search engine

Most Popular