ಬೆಂಗಳೂರು: ವಿದ್ಯಾರ್ಥಿಗಳು ಮತ್ತು ಪೋಷಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ SSLC ಫಲಿತಾಂಶ ನಾಳೆ ಮೇ ೦೯ ರಂದು ಬಿಡುಗಡೆಯಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್ ಮಂಜುಶ್ರೀ ಹೇಳಿದ್ದಾರೆ.
ಈ ಬಾರಿ ಎಸ್ ಎಸ್ ಎಲ್ಸಿ ಪರೀಕ್ಷೆಗೆ ೮.೬೯ ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ೪,೪೧,೯೧೦ ವಿದ್ಯಾರ್ಥಿ ಮತ್ತು ೪,೨೮,೦೫೮ ವಿದ್ಯಾರ್ಥಿನಿಯರು ಇದ್ದಾರೆ. ನಾಳೆ kseeb.kar.nic.in ಮತ್ತು karresults.nic.in ನಲ್ಲಿ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ