ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ
ಬೆಳಗಾವಿ: ಅರಣ್ಯ ರಕ್ಷಣೆ ಮಾಡುವುರದಲ್ಲಿ ಅರಣ್ಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ. ಆದರೂ ಇನ್ನೂ ಕೆಲ ಕಡೆಗಳಲ್ಲಿ ಅರಣ್ಯ ರಕ್ಷಣೆ ಕಾಪಾಡುವಲ್ಲಿ ಕೆಲ ಪ್ರಕರಣಗಳು ಇತ್ಯರ್ಥವಾಗಬೇಕಿದೆ ಎಂದು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಎನ್. ಇನವಳ್ಳಿ ಹೇಳಿದರು.
ಗುರುವಾರ ರಾಷ್ಟ್ರೀಯ ಅರಣ್ಯ ಹುತಾತ್ಮ ದಿನಾಚಾರಣೆಯಲ್ಲಿ ಹುತ್ಮಾತ್ಮರಾದ ಅರಣ್ಯ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದರು. ಅರಣ್ಯ ಪ್ರದೇಶ ಹಾಳಾಗಿದರೆ, ಕಾಡು ಪ್ರಾಣಿಗಳನ್ನು ಸರಂಕ್ಷಣೆ ಮಾಡುವುದರಲ್ಲಿ ಅರಣ್ಯ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಅರಣ್ಯ ಸಂಪತ್ತನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಅರಣ್ಯ ಸಂಪತ್ತು ಹಾನಿಯಾದರೇ ನಮ್ಮ ದುರಾಸೆಗೆ ಹಾಗೂ ವೈಯಕ್ತಿಕವಾಗಿ ಅರಣ್ಯ ಸಂಪತ್ತನ್ನು ಹಾಳು ಮಾಡುತ್ತಿದ್ದಾರೆ. ಅರಣ್ಯ ಸಿಬ್ಬಂದಿಗಳು ಕೇವಲ ಕಾಡು ಪ್ರಾಣಿಗಳ ರಕ್ಷಣೆ ಮಾಡುವುದಲ್ಲ. ಇದರ ಜೊತೆಗೆ ಅರಣ್ಯ ಕಾಪಾಡುವು ಅರಣ್ಯ ಹಾಗೂ ಪೊಲೀಸ್ ಇಲಾಖೆಯದ್ದಾಗಿದೆ ಎಂದರು.
ಅರಣ್ಯ ಸಂಪತ್ತನ್ನು ಕಾಪಾಡುವಲ್ಲಿ ಶ್ರಮಿಸಿ ಹುತಾತ್ಮರಾದ ಅರಣ್ಯ ಸಿಬ್ಬಂದಿಗಳ ಬಲಿದಾನ ಎಲ್ಲರೂ ಸ್ಮರಿಸಬೇಕಿದೆ ಎಂದು ಕರೆ ನೀಡಿದರು. ಐಜಿಪಿ ಡಾ. ಚೇತನಸಿಂಗ ರಾಠೋಡ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ,ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌಹಾಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.