ಮಂಡ್ಯ: 26ಕ್ಕೆ ಚುನಾವಣೆ ಇದೆ. ನಮ್ಮ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಸ್ಪರ್ಧೆ ಮಾಡಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಮಂಡ್ಯದಲ್ಲಿ ಸ್ಟಾರ್ ಚಂದ್ರು ಗೆಲ್ಲೋದು ಪೂರ್ವದಲ್ಲಿ ಸೂರ್ಯ ಹುಟ್ಟಿದಷ್ಟು ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಕಳೆದ ಸಲ ಕುಮಾರಸ್ವಾಮಿ ಪುತ್ರ ಸ್ಪರ್ಧೆ ಮಾಡಿದ್ರು. ಆಗ ಹೆಚ್ಡಿಕೆ ಸಿಎಂ ಆಗಿದ್ರು ಕೂಡ ಮಗನ ಗೆಲ್ಲಿಸಲು ಆಗಲಿಲ್ಲ. ಚನ್ನಪಟ್ಟಣ ಶಾಸಕರಾಗಿ ಬೆಂಗಳೂರು ಗ್ರಾಮಾಂತರದಲ್ಲೇ ಹೆಚ್ಡಿಕೆ ನಿಲ್ಲಬೇಕಿತ್ತು. ಅಲ್ಲಿ ಸೋಲುವ ಭೀತಿಯಿಂದ ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇಲ್ಲಿಯೂ ಕೂಡ ಸೋಲಿಸಿ ಮನೆಗೆ ಕಳಿಸಿ ಎಂದು ಹೇಳಿದರು.
ಇವತ್ತು ಸತ್ಯ ಸುಳ್ಳಿನ ನಡುವೆ ಚುನಾವಣೆ ನಡೀತ್ತಿದೆ. ಮೋದಿ ಹತ್ತು ವರ್ಷಗಳಲ್ಲಿ ಏನೂ ಮಾಡಿಲ್ಲ. ಕೊಟ್ಟ ಭರವಸೆ ಒಂದನ್ನು ಈಡೇರಿಸಿಲ್ಲ. ರೈತರ ಸಾಲಮನ್ನಾ ಮಾಡುವ ಕೆಲಸ ಮಾಡಲಿಲ್ಲ. ಎಲ್ಲದರ ದರ ಏರಿಕೆಯಾಯ್ತು ಆರೋಪಿಸಿದರು.
8-10 ತಿಂಗಳಲ್ಲಿ ಜನರನ್ನ ನಮ್ಮ ಕಾರ್ಯಕ್ರಮ ತಲುಪಿವೆ. ಇದರಿಂದ ಬಡವರಿಗೆ ಅನುಕೂಲ. ಬಿಜೆಪಿಯವರು ಮೋಸ ಮಾಡಿದ್ರು ಕೂಡ ಅನ್ನಬಾಗ್ಯ ಯೋಜನೆ ಜಾರಿ ಮಾಡಲಾಯಿತ. ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿ ಬದಲಿಗೆ ಹಣ ಹಾಕ್ತಿದ್ದೇವೆ ಎಂದು ಹೇಳಿದರು.
ಮೋದಿ ಸುಳ್ಳು ಹೇಳಿದ್ದಾರೆ. ಧರ್ಮ, ಜಾತಿ ಹೆಸರಲ್ಲಿ ಭಾವನಾತ್ಮಕ ಭಾಷಣ ಆಡ್ತಾರೆ. ಯಾರು ಕೊಟ್ಟ ಮಾತಿನಂತೆ ನಡೆದಿದ್ದಾರೆ ಅವರಿಗೆ ಆಶೀರ್ವಾದ ಮಾಡಿ. ವೆಂಕಟರಮಣೇಗೌಡರನ್ನ ಆಶೀರ್ವಾದ ಮಾಡಿ ಲೋಕಸಭೆಗೆ ಕಳಿಸಿ ಎಂದು ಮನವಿ ಮಾಡಿದರು.
ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಬಿಜೆಪಿ, ಜೆಡಿಎಸ್ ಸಂಸದರು ಧನಿ ಎತ್ತಿಲ್ಲ. ಬಡವರು, ರಾಜ್ಯದವರ ಬಗ್ಗೆ ಪ್ರಸ್ತಾಪ ಮಾಡುವವರು ಗೆಲ್ಲಬೇಕು. ನಾವು ಅಧಿಕಾರಕ್ಕೆ ಬಂದ ಕೂಡಲೇ ಶುಗರ್ ಫ್ಯಾಕ್ಟರಿಗೆ ಐವತ್ತು ಕೋಟಿ ಮಂಜೂರು ಮಾಡಿದ್ದೇವೆ. ಬಜೆಟ್ ನಲ್ಲಿ ಹೊಸ ಫ್ಯಾಕ್ಟರಿ ಕಟ್ಟಲು ಘೋಷಣೆ ಮಾಡಲಾಗಿದೆ. ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಕಟ್ಟಲು ನಿರ್ಧರಿಸಲಾಗಿದೆ. KRSನಲ್ಲಿ ಅತ್ಯಾಧುನಿಕ ಪ್ರೇಕ್ಷಣೀಯ ಸ್ಥಳಕ್ಕೆ ನಿರ್ಧಾರ ಮಾಡಲಾಗಿದೆ. ಹೇಮಾವತಿ ಮತ್ತು ವಿಸಿ ನಾಲೆ ಆಧುನೀಕರಣ. ಕೊನೆ ಭಾಗದ ಜನರಿಗೆ ನೀರು ಕೊಡಿಸಲು ಬದ್ಧ ಎಂದರು.
ವೆಂಕಟರಮಣೇಗೌಡರಿಗೆ ತಪ್ಪದೇ ಆಶೀರ್ವಾದ ಮಾಡಿ. ಲೋಕಸಭೆಗೆ ಕಳಿಸಿ. ಮಂಡ್ಯ ಜನ ಬಹಳ ಪ್ರಬುದ್ಧರು.
ಯಾರನ್ನ ಆಯ್ಕೆ ಮಾಡಬೇಕು ಬೇಡ ಅನ್ನೋದು ನಿಮಗೆ ಗೊತ್ತಿದೆ. ಹೀಗಾಗಿ ವೆಂಕಟರಮಣೇಗೌಡರಿಗೆ ತಪ್ಪದೇ ಆಶೀರ್ವಾದ ಮಾಡಿ ಲೋಕಸಭೆಗೆ ಕಳಿಸಿ ಎಂದ ಅವರು ನಾಡಿನ ಜನತೆಗೆ ಶ್ರೀರಾಮ ನವಮಿ ಶುಭಾಶಯ ಹೇಳಿದರು.
ಇದು ಒಂದು ಐತಿಹಾಸಿಕ ದಿನ. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದೀರಿ. ರಾಹುಲ್ ಗಾಂಧಿಯವರಿಗೆ ಶಕ್ತಿ ತುಂಬಿದ್ದೀರಿ. ನಿಮಗೆಲ್ಲ ಪಕ್ಷದ ವತಿಯಿಂದ ಧನ್ಯವಾದ ಎಂದರು.