Saturday, April 19, 2025
Google search engine

Homeರಾಜ್ಯ"ಗ್ರಾಮ ಚಲೋ" ಅಭಿಯಾನದ ಅಂಗವಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ ಎಸ್ ಅರುಣ್ ಸಭೆ

“ಗ್ರಾಮ ಚಲೋ” ಅಭಿಯಾನದ ಅಂಗವಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ ಎಸ್ ಅರುಣ್ ಸಭೆ

ಶಿವಮೊಗ್ಗ: ವಿಕಸಿತ ಭಾರತಕ್ಕಾಗಿ ದೇಶಾದ್ಯಂತ ಇಂದಿನಿಂದ 3 ದಿನಗಳ ಕಾಲ ನಡೆಯುತ್ತಿರುವ “ಗ್ರಾಮ ಚಲೋ” ಅಭಿಯಾನದ ಅಂಗವಾಗಿ ಶಿವಮೊಗ್ಗದ ಜಯನಗರದಲ್ಲಿ ಅಂಬೇಡ್ಕರ್ ಶಕ್ತಿ ಕೇಂದ್ರದ , 10ನೇ ವಾರ್ಡ್ ಬೂತ್ ಪದಾಧಿಕಾರಿಗಳೊಂದಿಗೆ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ ಎಸ್ ಅರುಣ್ ಅವರು ಸಭೆ ನಡೆಸಿದರು.

ಬೂತ್ 71ರಲ್ಲಿ “2024 ಮತ್ತೊಮ್ಮೆ ಬಿಜೆಪಿ” ಗೋಡೆ ಬರಹಕ್ಕೆ ಚಾಲನೆ ನೀಡಿ, ಬೂತ್ ನ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ಅವರ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಯ ಕುರಿತು  ತಿಳಿಸಲಾಯಿತು. ಬಿ. ವೈ ರಾಘವೇಂದ್ರ ಅವರ ಯೋಜನೆಗಳ ಕುರಿತಾಗಿ QR ಸ್ಕ್ಯಾನ್ ಮಾಡಿ ವೀಕ್ಷಿಸಲು ತಿಳಿಸಲಾಯಿತು.

ಪಕ್ಷದ ಕಾರ್ಯಕರ್ತರು ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಮೋದಿ ಜೀ ಅವರ ಸರ್ಕಾರದ ಎಲ್ಲಾ ಯೋಜನೆಗಳು, ಸಾಧನೆಗಳು ಹಾಗೂ ಜನಕಲ್ಯಾಣ ಕಾರ್ಯಕ್ರಮಗಳನ್ನು ಮನೆ ಮನೆಗಳಿಗೆ ತಲುಪಿಸಿ ಅಭಿಯಾನವನ್ನು ಯಶಸ್ವಿಗೊಳಿಸೋಣ. ಮಗದೊಮ್ಮೆ ಮೋದಿಜೀ ಅವರನ್ನು ಪ್ರಧಾನಿ ಪಟ್ಟಕ್ಕೇರಿಸುವ ಸಂಕಲ್ಪಕ್ಕೆ ಜೊತೆಯಾಗೋಣ.

ವಾರ್ಡ್ ಅಧ್ಯಕ್ಷರಾದ ಎಸ್ ಪಿ ದಿನೇಶ್, ರಾಜೇಂದ್ರ, ವೆಂಕಟೇಶ್, ಮುರುಗನ್, ಪ್ರಜ್ವಲ್, ಯೋಗೀಶ್, ಗಣೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular