ಮೈಸೂರು : ರಾಜ್ಯ ಬಿಜೆಪಿಯ ಬಣ ಬಡಿದಾಟ ಇದೀಗ ಪೂರ್ತಿ ಬೀದಿಗೆ ಬಂದಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ, ಬಿಜೆಪಿ ಕಾರ್ಯಕರ್ತರೇ ಕಿಡಿ ಕಾರಿದ್ದಾರೆ. ಇಂದು ಮೈಸೂರಿನಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲಿ ಯತ್ನಾಳನ್ನು ಉಚ್ಚಾಟನೆ ಮಾಡಿ ಉಗಿದು ಆಚೆ ಹಾಕಿ ಎಂದು ಕೆಂಡಾಮಂಡಲಗೊಂಡರು.
ಇಂದು ಬಿ ವೈ ವಿಜಯೇಂದ್ರ ಬಣದ ಎಂಪಿ ರೇಣುಕಾಚಾರ್ಯ ಬಿಸಿ ಪಾಟೀಲ್ ಸೇರಿದಂತೆ ಹಲವು ನಾಯಕರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು ಬಳಿಕ ಸುದ್ದಿಗೋಷ್ಠಿ ಆರಂಭಿಸಿದಾಗ ಬಿಜೆಪಿ ಹಲವು ಕಾರ್ಯಕರ್ತರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ಹೊರ ಹಾಕಿದರು. ಆತನ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಅಲ್ಲದೆ ಕಾರ್ಯಕರ್ತರ ಹುಮ್ಮಸ್ಸು ಕುಗ್ಗಿಸುತ್ತಿದ್ದಾರೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಅವನು ಮುಖವಾಡ ಹಾಕಿಕೊಂಡಿರುವ ಹಿಂದುತ್ವ ನಾಯಕ. ಅವನನ್ನು ಉಗಿದು ಆಚೆ ಹಾಕಿ ಎಂದು ಕಾರ್ಯಕರ್ತರು ಕೆಂಡಮಂಡಲವಾಗಿದ್ದಾರೆ. ಏಕವಚನದಲ್ಲಿ ಯತ್ನಾಳ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ. ಯತ್ನಾಳ ನನ್ನ ಉಚ್ಛಾಟನೆ ಮಾಡಿ ಬಿಸಾಕಿ ಅವನಿಂದ ಏನು ಆಗಲ್ಲ ಲಾಸ್ ಆಗೋದು ನಮಗೆ ಎಂದು ಆಕ್ರೋಶ ಹೊರ ಹಾಕಿದರು.