Monday, April 21, 2025
Google search engine

Homeರಾಜಕೀಯಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಸಂಸದೆ ಸುಮಲತಾ ಅಂಬರೀಶ್

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ತಮಿಳುನಾಡು ಮೊದಲಿನಿಂದಲೂ ಕಾವೇರಿ ನೀರಿನ ವಿಚಾರದಲ್ಲಿ ಒತ್ತಡ ಹೇರುತ್ತಿದೆ.  ಕರ್ನಾಟಕ ಸರ್ಕಾರ ಇದರಲ್ಲಿ ವಿಫಲವಾಗಿದೆ. ನಮ್ಮ ಅಧಿಕಾರಿಗಳು ಸರಿಯಾದ ವಾದ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ತಮಿಳುನಾಡು ಸರ್ಕಾರ ನಿರ್ಣಯ ವಿಚಾರ. ಸುಪ್ರೀಂ ಕೋರ್ಟ್‌ ಗೂ ಮಧ್ಯಪ್ರವೇಶ ಮಾಡಲ್ಲ ಎಂದಿದೆ. CWMA ನಿರ್ಧಾರವೇ ಅಂತಿಮವಾಗಿದೆ. ಸುಪ್ರೀಂ ಕೋರ್ಟ್ ಹಾಗೇ ಹೇಳಿದ ಮೇಲೆ ಇನ್ಯಾರು ಮಧ್ಯಪ್ರವೇಶ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಸರ್ಕಾರ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ನನ್ನ ಕೈಲಿ ಆಗಿಲ್ಲ ಅಂದ್ರೆ ನಿಮ್ಮ ಕಡೆ ತೋರಿಸುವುದು ಸುಲಭ. ಆದರೆ ಸಮಸ್ಯೆಗೆ ಪರಿಹಾರ ಹುಡುಕುವುದು ಮುಖ್ಯ ಎಂದು ತಿಳಿಸಿದರು.

ಇಡೀ ದೇಶಕ್ಕೆ ಪ್ರಧಾನಮಂತ್ರಿ. ಒಂದು ರಾಜ್ಯದ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟ ಮಾಡಿಕೊಂಡಿದ್ದಾರೆ, ಮಾತನಾಡಿ ಬಗೆಹರಿಸಬಹುದು. ಮುಖ್ಯಮಂತ್ರಿಗಳು ಒಂದು ಜಿಲ್ಲೆ ಪರ ಮಾತನಾಡಲು ಸಾಧ್ಯವಿಲ್ಲ. ಹಾಗೇ ಪಿಎಂ ಕೂಡ ಒಂದು ರಾಜ್ಯದ ಪರ ಇರಲು ಆಗಲ್ಲ. ಪಾಕಿಸ್ತಾನ, ‌ಭಾರತ ಕುಳಿತು ಮಾತನಾಡಿಕೊಂಡಿದೆ. ಎರಡು ರಾಜ್ಯಗಳು ಕುಳಿತು ಮಾತನಾಡಲು ಯಾಕೆ ಸಾಧ್ಯವಿಲ್ಲ.? ಎಂದು ಪ್ರಶ್ನಿಸಿದರು.

ಸರ್ಕಾರದ ಜೊತೆ ಮೂರು ಸಭೆಯಲ್ಲಿ ಭಾಗವಹಿಸಿದ್ದೇನೆ. ಚರ್ಚೆ ಆಗಿದೆ ಅಷ್ಟೇ ಪರಿಹಾರ ಕ್ರಮ ಈವರೆಗೆ ಆಗಿಲ್ಲ. ದಶಪಥ ಹೆದ್ದಾರಿಯಲ್ಲಿ ಎಂಟ್ರಿ, ಎಕ್ಸಿಟ್ ಮುಚ್ಚಿರುವ ವಿಚಾರ. ಮೊದಲೇ ತಾತ್ಕಾಲಿಕ ಎಂಟ್ರಿ, ಎಕ್ಸಿಟ್ ಎಂದು ಹೇಳಲಾಗಿತ್ತು. ಹೈವೆ ರೂಲ್ಸ್ ಪ್ರಕಾರವೇ ಮಾಡಲಾಗ್ತಿದೆ. ಎಲ್ಲಾ ಕಡೆ ಎಂಟ್ರಿ, ಎಕ್ಸಿಟ್ ಬೇಕು ಎಂದರೆ ಅದು ಸಾಧ್ಯವಾಗಲ್ಲ. ಮುಂದಿನ ದಿಶಾ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡ್ತೀನಿ ಎಂದರು.

ಮನ್‌ ಮುಲ್ ಅಗ್ನಿ ಅವಘಡ ವಿಚಾರವಾಗಿ ಮಾತನಾಡಿ, NOC ಪಡೆಯದೆ ಕಟ್ಟಡ ಕಟ್ಟಿರುವುದು ತಪ್ಪು. ಮುನ್ನೆಚ್ಚರಿಕೆ ಅನುಸರಿಸದೆ ಯಾವುದೇ ಕಟ್ಟಡ ಕಟ್ಟಬಾರದು. ತಪ್ಪು ಮಾಡಿದವರ ವಿರುದ್ಧ ತನಿಖೆಯಾಗಿ ಶಿಕ್ಷೆಯಾಗಬೇಕು ಎಂದರು.

ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ಬಿಜೆಪಿಯಿಂದ ನನಗೆ ಈವರೆಗೆ ಕಮ್ಯುನಿಕೇಶನ್ ಆಗಿಲ್ಲ. ಈ ಬಗ್ಗೆ ಈಗ ನಾನು ಮಾತನಾಡಲ್ಲ. ಯಾಕೆ ಈ ನಿರ್ಧಾರ ಆಯ್ತು, ಏನೆಲ್ಲಾ ಚರ್ಚೆ ಆಯ್ತು ಎಂದು ಕೇಳಬೇಕು. ನಾನಗೇ ನಾನು ಕೇಳಲ್ಲ ಅವರಿಂದ ಕರೆ ಬರಬೇಕು. ಈಗ ನಾನು ನನ್ನ ನಿರ್ಧಾರ ತಿಳಿಸಲ್ಲ. ರಾಜಕಾರಣ, ಚುನಾವಣೆ ಬಗ್ಗೆ ಹೆಚ್ಚಾಗಿ ಮಾತನಾಡಲ್ಲ. ಸಮಯ ಬಂದಾಗ ಎಲ್ಲಾ ಮಾತನಾಡ್ತೀನಿ ಎಂದರು.

RELATED ARTICLES
- Advertisment -
Google search engine

Most Popular