Friday, April 11, 2025
Google search engine

Homeರಾಜ್ಯಸುದ್ದಿಜಾಲಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗುವಂತೆ ಚಿಕ್ಕಕೊಪ್ಪಲು ಅರುಣ್ ಕಲ್ಲಹಟ್ಟಿ ಒತ್ತಾಯ

ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗುವಂತೆ ಚಿಕ್ಕಕೊಪ್ಪಲು ಅರುಣ್ ಕಲ್ಲಹಟ್ಟಿ ಒತ್ತಾಯ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗ ಬೇಕೆಂದು ಸಾಲಿಗ್ರಾಮ ತಾಲೂಕು ಸಂಗೊಳ್ಳಿ ರಾಯಣ್ಣ ಯುವವೇದಿಕೆ ಅಧಕ್ಷ ಚಿಕ್ಕಕೊಪ್ಪಲು ಅರುಣ್ ಕಲ್ಲಹಟ್ಟಿ ಒತ್ತಾಯಿಸಿದರು.

ಸಾಲಿಗ್ರಾಮ ತಾಲೂಕಿನ‌ ಚಿಕ್ಕಕೊಪ್ಪಲು ಮತ್ತು ದೊಡ್ಡಕೊಪ್ಪಲು ಆವಳಿ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮಡಿದ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣರವರ ಜನ್ಮದಿನವಾದ ಆಗಸ್ಟ್ 15 ರಂದು ತಾಲೂಕಿನ ಎಲ್ಲಾ ಶಾಲಾ – ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಆಚರಿಸಬೇಕು ಮತ್ತು ಅವರ ಭಾವ ಚಿತ್ರವನ್ನು ಕಡ್ಡಾಯವಾಗಿ ಹಾಕಲು‌ ಅದೇಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ರು ಕನ್ನಡ ಸಂಸ್ಕೃತಿ ಸಚಿವ ಅವರಿಗೆ ಮನವಿ ಮಾಡಿದರು.

ಸ್ವಾತಂತ್ರ್ಯಹೋರಾಟಕ್ಕೆ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದು, ಅವರುಗಳಲ್ಲಿ ರಾಯಣ್ಣನ ಪಾತ್ರ ಮಹತ್ವದ್ದಾಗಿದೆ ಕಿತ್ತೂರು ನಾಡನ್ನು ಜಗತ್ತಿಗೆ ಪರಿಚಯಿಸಿದ ಕೀರ್ತ ಸಂಗೊಳ್ಳಿ ರಾಯಣ್ಣನಿಗೆ ಸಲ್ಲುತ್ತದೆ ಇಂತಹ ಮಹಾನ್ ಹೋರಾಟಗಾರನ ಜನ್ಮ ದಿನಾಚರಣೆಯನ್ನು‌ ಆಚರಿಸುವ ಮೂಲಕ ಸರ್ಕಾರ ಗೌರವ ಸಲ್ಲಿಸಲು ಮುಂದಾಗ ಬೇಕೆಂದರು.

ಇದೇ ಸಂದರ್ಭದಲ್ಲಿ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪುಷ್ವಾಚಾರ್ಚನೆ ಮಾಡಿ ಸಿಹಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕುಮಾರ್ ಕರ್ತಾಳ್, ಶಿಕ್ಷಕರಾದ ಮೇಲೂರ್ ಕೇಶವ್,ಸವಿತಾ,ಸ್ವಾಮಿ,ದೀಪಾ,ಕೌಶಲ್ಯ, ಸಂಗೊಳ್ಳಿ ರಾಯಣ್ಣ ಯುವ ವೇದಿಯ ಕಲ್ಲಹಟ್ಡಿ ಗಿರೀಶ್,ಮನುಕೋಳಿ, ಕಾಡುವಿಜಯ್, ಅಭಿ,ವಿನೋದ್, ಗಾಂಧಿ,ಅರುಣ್, ನಿತಿನ್,ಸಂದೀಪ್, ರಾಜೇಶ್ ಚರಣ್,ದರ್ಶನ್,ಹೇಮಂತ್, ಗಗನ್, ಸ್ವಾಮಿ, ಚಿರಂತ್, ಕಾರಂತ,ಕಾರ್ತಿಕ್, ಶ್ರೇಯ,ವಿಕಾಸ್,ಪ್ರದೀಪ್, ಚಂದು, ಹಾಗೂ ಸದಸ್ಯರು ಗ್ರಾಮದ ಮುಖಂಡರಾದ ಕುಮಾರಣ್ಣ,ಗೌರಪ್ಪ, ನಾಗರಾಜು ಮತ್ತು ಎರಡು ಗ್ರಾಮದ ಗ್ರಾಮಸ್ಥರು ಹಾಜರಿದ್ದರು.

RELATED ARTICLES
- Advertisment -
Google search engine

Most Popular