Saturday, April 19, 2025
Google search engine

Homeಸ್ಥಳೀಯರಾಜ್ಯಮಟ್ಟದ ಗಾಂಧಿ ಪ್ರಬಂಧ ಸ್ಪರ್ಧೆ: ಕುಸುಮ ಬಾಯಿ ತೃತೀಯ ಸ್ಥಾನ

ರಾಜ್ಯಮಟ್ಟದ ಗಾಂಧಿ ಪ್ರಬಂಧ ಸ್ಪರ್ಧೆ: ಕುಸುಮ ಬಾಯಿ ತೃತೀಯ ಸ್ಥಾನ

ಮೈಸೂರು: ರಾಜ್ಯ ಮಟ್ಟದ ಗಾಂಧಿ ಪ್ರಬಂಧ ಸ್ಪರ್ಧೆಯಲ್ಲಿ ನಗರದ ಜೆ.ಎಸ್.ಎಸ್.ಪದವಿ ಕಾಲೇಜಿನ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ‌ಕುಸುಮ ಬಾಯಿ, ಆರ್. ತೃತೀಯ ಸ್ಥಾನ ಪಡೆದಿದ್ದಾರೆ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು ಇವರ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ  ಪ್ರಬಂಧ ಸ್ಪರ್ಧೆಯಲ್ಲಿ ಪದವಿ ವಿಭಾಗದಲ್ಲಿ  ಪ್ರಥಮ ಸ್ಥಾನ ಪಡೆದಿದ್ದ ಈ ವಿದ್ಯಾರ್ಥಿನಿಯ ಪ್ರಬಂಧವನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗಿತ್ತು.

ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುವ ಕುಸುಮ ಬಾಯಿ ಇವರಿಗೆ 11 ಸಾವಿರ ರೂ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಡಿ.ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular