Sunday, April 20, 2025
Google search engine

Homeಸ್ಥಳೀಯರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ: ಕೆ.ಆರ್.ನಗರದ ಅಮಿತಾ ಗುರುರಾಜುಗೆ ಪ್ರಥಮ ಸ್ಥಾನ

ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ: ಕೆ.ಆರ್.ನಗರದ ಅಮಿತಾ ಗುರುರಾಜುಗೆ ಪ್ರಥಮ ಸ್ಥಾನ

ಕೆ.ಆರ್.ನಗರ: ನಂಜನಗೂಡಿನ‌ ನಂಜುಡೇಶ್ವರ ಯೋಗ ವಿದ್ಯಾಲಯದ ವತಿಯಿಂದ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಕೆ.ಆರ್.ನಗರದ ಅಮಿತಾಗುರುರಾಜು ಅವರು ಪ್ರಥಮ ಸ್ಥಾನ ಪಡೆದಿದ್ದಾರೆ

ಭಾನುವಾರ ನಡೆದ ಈ ಯೋಗಾಸನ ಸ್ಪರ್ಧೆಯಲ್ಲಿ ಸುಮಾರು 25ಕ್ಕು ಹೆಚ್ಚು ಯೋಗಪಟುಗಳು ಭಾಗವಹಿಸಿದ್ದು, 84 ಅಂಕ ಪಡೆದ ಅಮಿತಾ ಗುರುರಾಜ್ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.

ಯೋಗಾಸನದ ಸಮಾರೋಪ ಸಮಾರಂಭದಲ್ಲಿ ಇವರಿಗೆ ನಂಜುಡೇಶ್ವರ ಯೋಗ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಮೂರ್ತಿ, ಉಪಾಧ್ಯಕ್ಷ ಮಹೇಂದ್ರ, ಕಾರ್ಯದರ್ಶಿ ರಾಜೇಶ್ ಬಹುಮಾನ ವಿತರಣೆ ಮಾಡಿದರು.

ಇವರು ಇತ್ತೀಚಿಗೆ ಬೆಂಗಳೂರಿನ‌ ಕರ್ನಾಟಕ ಸೌತ್ ಜೋನ್ ಯೋಗ  ಅಸೋಸಿಯೇಷನ್ ವತಿಯಿಂದ ನಡೆದಿದ್ದ ಯೋಗ ಸ್ಪರ್ಧೆಯಲ್ಲಿ ಅಮಿತಾಗುರುರಾಜ್  ಅವರು ಪ್ರಥಮ ಸ್ಥಾನ ಪಡೆದು ಕೊಂಡಿದ್ದ ಇವರು ಕೆ.ಆರ್.ನಗರದ ಸುಮುಖ ಯೋಗ ಕೇಂದ್ರದ ಯೋಗ ತರಬೇತಿದಾರರಾದ ರೇವಣ್ಣ ಮತ್ತು ಯೋಗಮಣಿ ಅವರಲ್ಲಿ ತರಬೇತಿ ಪಡೆದಿದ್ದಾರೆ.

ಇವರು ಕೆ.ಆರ್.ನಗರ ನಂ.-5 ಹಾರಂಗಿ ನೀರಾವರಿ ಇಲಾಖೆಯ ಎಇಇ ಗುರುರಾಜು ಅವರ ಪತ್ನಿಯಾಗಿದ್ದು, ಇವರ ಸಾಧನೆಗೆ ಕೆ.ಆರ್.ನಗರ ಪುರಸಭೆ ಸಭಾ ಸದಸ್ಯ ಉಮೇಶ್ ಅವರು ಅಭಿನಂದಿಸಿದ್ದಾರೆ

RELATED ARTICLES
- Advertisment -
Google search engine

Most Popular