ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಮೋತಿಮಹಲ್ ಸಭಾಂಗಣದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಪ್ರಯುಕ್ತ ಕನ್ಯಾಡಿ ಸೇವಾ ಭಾರತಿ ಸಂಸ್ಥೆ ನೇತೃತ್ವದಲ್ಲಿ ರಾಜ್ಯ ಮಟ್ಟದ ರಿಹ್ಯಾಬ್ ಮೇಳ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಒಟ್ಟು ೨೫ ಸಾವಿರ ಮಂದಿ ಬೆನ್ನು ಮೂಲೆ ಮುರಿತಕ್ಕೊಳಗಾಗಿ ಬೆಡ್ ರೆಸ್ಟ್ ನಲ್ಲಿದ್ದಾರೆ. ಅವರಿಗೆ ಸರಕಾರದ ವತಿಯಿಂದ ತಿಂಗಳಿಗೆ ೧೪೦೦ ರೂ ಮಾಸಾಶನ ನೀಡುತ್ತಿದೆ. ಬೆನ್ನು ಮೂಲೆ ಮುರಿತಕ್ಕೊಳಗಾಗಿ ಮಲಗಿದ್ದಲ್ಲೇ ಕಾಲಕಳೆಯುವ ಮಂದಿಯಲ್ಲಿ ಯುವಕರು, ಮಕ್ಕಳೂ ಇದ್ದಾರೆ ಇಂಥವರ ಪರ ವಿಧಾನಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಪುತ್ತೂರು ಶಾಸಕರು ಆ ಕುಟುಂಬಕ್ಕೆ ಆಸರೆ ನೀಡುವಂತೆ ಸರಕಾರವನ್ನು ಒತ್ತಾಯ ಮಾಡಿದ್ದಾರೆ. ಇದಕ್ಕೆ ನಾನು ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾನು ಇಂದು ನಿಮ್ಮ ಸಮಸ್ಯೆಯನ್ನು ಆಲಿಸಿದ್ದೇನೆ, ನಿಮ್ಮನ್ನು ಕಂಡು ನನ್ನ ಮನಸ್ಸಿಗೂ ದುಖವಾಗಿದೆ. ಸರಕಾರದ ಜೊತೆ ಚರ್ಚಿಸಿಸಿ ನಿಮಗೆ ಸರಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ವೃದ್ದಿಸುವಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದರು.
ಸಭಾ ಕಾರ್ಯಕ್ರಮ ಮುಗಿದ ಬಳಿಕ ಸಭೆಯಲ್ಲಿದ್ದ ಸುಮಾರು ೨೦೦ ಕ್ಕೂ ಮಿಕ್ಕಿ ಬೆನ್ನುಮೂಲೆ ಮುರಿತಕ್ಕೊಳಗಾದ ಮಂದಿಯ ಬಳಿ ಬಂದು ಸಾಂತ್ವನ ಹೇಳಿದರು. ಈ ಪೈಕಿ ಇಬ್ಬರು ಪುಟ್ಟ ಪಕ್ಕಳು ಪರಿಸ್ಥಿತಿಯನ್ನು ಕಂಡು ಶಾಸಕರು ಕಣ್ಣೀರಾದರು.
ಬೆನ್ನು ಮೂಲೆ ಮುರಿತಕ್ಕೊಳಗಾದವರ ಪೈಕಿ ಬಹುತೇಕ ಮಂದಿ ಯುವಕರೇ ಆಗಿದ್ದಾರೆ. ನಡೆಯಲು ಸಾದ್ಯವಾಗದೆ ವೀಲ್ ಚೆಯರ್ ಮೂಲಕವೇ ತೆರಳುವ ಈ ನರಕಯಾತನೆಯನ್ನು ಕಂಡು ಶಾಸಕರು ಕಣ್ಣೀರು ಹಾಕಿದ್ದಾರೆ. ಧೈರ್ಯ ಕಳೆದುಕೊಳ್ಳಬೇಡಿ ಖಂಡಿತವಾಗಿಯೂ ಸರಕಾರ ನಿಮ್ಮ ಜೊತೆ ಇದ್ದೇ ಇದೆ ಎಂದು ಶಾಸಕರು ಭರವಸೆಯನ್ನು ನೀಡಿದರು.ಮಂಗಳೂರಿಗೆ ಬಂದಿರುವ ಎಲ್ಲಾ ರೋಗಿಗಳಿಗೂ ವಾಸ್ತವ್ಯದ ವ್ಯವಸ್ಥೆಯನ್ನು ಶಾಶಕರೇ ಮಾಡಿಕೊಟ್ಟಿದ್ದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತು ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.