Monday, December 1, 2025
Google search engine

Homeಕ್ರೀಡೆಯೋಗೇಶ್ ರಾಜ್ಯ ಮಟ್ಟಕ್ಕೆ ಆಯ್ಕೆ

ಯೋಗೇಶ್ ರಾಜ್ಯ ಮಟ್ಟಕ್ಕೆ ಆಯ್ಕೆ

ವರದಿ: ಎಡತೊರೆ ಮಹೇಶ್

ಎಚ್. ಡಿ ಕೋಟೆ: ತಾಲೂಕಿನ ಅಂತರಸಂತೆ(ಶಿರಮಳ್ಳಿ) ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವ ಯೋಗೇಶ್, ಇತ್ತೀಚಿಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಮೈಸೂರು ಜಿಲ್ಲಾ ಮಟ್ಟದ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.


ಶಾಲೆಯ ಪ್ರಾಂಶುಪಾಲರಾದ ಮಹದೇವು, ನಿಲಯ ಪಾಲಕರಾದ ಸಂಜಯ್ ಕುಮಾರ್, ಬೋಧಕ ಮತ್ತು ಬೋಧಕೇತರ ವರ್ಗ, ಮಾರ್ಗದರ್ಶಕ ಕೆ.ಸಿ.ಚಿನ್ನಸ್ವಾಮಿ ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular