ರಾಮನಗರ: ಜಿಲ್ಲಾಡಳಿತದ ವತಿಯಿಂದನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ. ೨೬ರ ಶುಕ್ರವಾರ ಆಯೋಜಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿಸಾರಿಗೆ, ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶನೀಡಿದರು.
ಅವರುನೀಡಿದಸಂದೇಶದ ಸಾರಇಂತಿದೆ: ಭಾರತವು ಸ್ವಾತಂತ್ರ್ಯ ನಂತರ ೧೯೫೦ ರಜನವರಿ ೨೬ ರಂದುತನ್ನದೇ ಸಂವಿಧಾನವನ್ನು ಜಾರಿಗೊಳಿಸಿ ಸ್ವತಂತ್ರಗಣತಂತ್ರರಾಷ್ಟ್ರವಾಯಿತು.ಇದರಿಂದಾಗಿಜನವರಿ ೨೬, ಭಾರತೀಯರಿಗೆ ಮಹತ್ವದ ದಿನ. ಈ ಸಂದರ್ಭದಲ್ಲಿ ಸಂವಿಧಾನದಆಶಯದಂತೆ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಲಭ್ಯವಾಗುವ ಸಮ ಸಮಾಜ ನಿರ್ಮಾಣದ ದಾರಿಗಳನ್ನು ಬಲಪಡಿಸಲುಚಿಂತಿಸಬೇಕು.ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿತಮ್ಮನ್ನು ಅರ್ಪಿಸಿಕೊಂಡ ಮಹಾತ್ಮಗಾಂಧೀಜಿ ಮತ್ತುಇತರದೇಶ ಪ್ರೇಮಿಗಳು ಹಾಗೂ ನಾಯಕರತ್ಯಾಗ ಬಲಿದಾನಗಳನ್ನು ನಾವು ಸ್ಮರಿಸಲೇಬೇಕು. ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ೫೬೨ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದದೇಶವನ್ನು ಒಂದುಗೂಡಿಸಿ ದೇಶದಏಕತೆ, ಅಖಂಡತೆಯನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾ ಬಾಯಿ ಪಟೇಲ್‌ಅವರನ್ನು ಹಾಗೂ ಅವರ ಸಾಧನೆಗಳನ್ನು ಸ್ಮರಿಸಲೇಬೇಕು.
ಅನಕ್ಷರತೆ, ಅನಾರೋಗ್ಯ, ಹಸಿವು ಮತ್ತು ಬಡತನದಲ್ಲಿದ್ದದೇಶವನ್ನು ಮುನ್ನಡೆಸಿದ ನಾಯಕರನ್ನು ನಾವು ಸ್ಮರಿಸಿ ಗೌರವಿಸೋಣ, ಜೊತೆಗೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಮುಖಜವಾಬ್ದಾರಿಯನ್ನುಎಲ್ಲರೂಅರಿತು ಕೊಳ್ಳೋಣ.
೧೯೩೦ರ ಜನವರಿ ೨೬ರಂದು ಭಾರತೀಯರಾಷ್ಟ್ರೀಯಕಾಂಗ್ರೇಸ್‌ನ ಲಾಹೋರ್‌ಅಧಿವೇಶನದಲ್ಲಿಪೂರ್ಣ ಸ್ವರಾಜ್ ನಿರ್ಣಯವನ್ನುಅಂಗೀಕರಿಸಲಾಯಿತು.ಈ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿಜನವರಿ ೨೬ರಂದೇ ಸಂವಿಧಾನ ಪ್ರಾರಂಭದ ದಿನಾಂಕವೆಂದುನಿರ್ದಿಷ್ಟವಾಗಿಆಯ್ಕೆ ಮಾಡಿಕೊಂಡಿತು.
ಅಂದಿನಿಂದಜಾರಿಗೊಂಡ ಸಂವಿಧಾನವುಇಂದಿನವರೆಗೆ ಹಲವಾರು ತಿದ್ದುಪಡಿಗಳನ್ನು ಪ್ರಸ್ತುತ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಸತ್ತುಅಂಗೀಕಾರ ಮಾಡಿಆಚರಣೆಗೆತಂದಿದೆ.
ಡಾ. ಬಿ.ಆರ್.ಅಂಬೇಡ್ಕರ್‌ದೂರದೃಷ್ಠಿಯ ಫಲವಾಗಿ, ಮೂಲಭೂತ ಹಕ್ಕುಗಳಾದ ೧) ಸಮಾನತೆಯ ಹಕ್ಕು, ೨) ಸ್ವಾತಂತ್ರ್ಯದ ಹಕ್ಕು, ೩) ಶೋಷಣೆಯ ವಿರುದ್ಧ ಹಕ್ಕು, ೪) ಧಾರ್ಮಿಕ೫) ಸ್ವಾತಂತ್ರ್ಯದ ಹಕ್ಕು, ೬) ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು, ೭) ಸಂವಿಧಾನಾತ್ಮಕ ಪರಿಹಾರ ಹಕ್ಕುಗಳು ಸಂವಿಧಾನ ಒಳಗೊಂಡಿದೆ.
ಸಂವಿಧಾನರಚನೆಗೂ ಮುನ್ನ ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸರ್ವರೀತಿಯಲ್ಲಿ ತುಳಿತಕ್ಕೊಳಗಾದ ಜನರನ್ನು ಸಂವಿಧಾನದಆಶಯದಂತೆ ಮೇಲೆಕೆತ್ತುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಬಂದ ನಂತರಎಲ್ಲರನ್ನು ಸಮಾನರೀತಿಯಿಂದಕಂಡುಎಲ್ಲರಿಗೂ ಸಮಾನ ಅವಕಾಶಗಳು ದೊರಕಿಸುವ ನಿಟ್ಟಿನಲ್ಲಿಎಲ್ಲಾ ಸರ್ಕಾರಗಳು ಕಾರ್ಯನಿರ್ವಹಿಸಿರುವುದನ್ನು ನಾವು ಗಮನಿಸಬಹುದಾಗಿದೆ.
ಸ್ವಾತಂತ್ರ್ಯ ನಂತರ, ಭಾರತೀಯರಾಷ್ಟ್ರೀಯಕಾಂಗ್ರೆಸ್ ನೇತೃತ್ವದ ಸರ್ಕಾರಅಧಿಕಾರಕ್ಕೆ ಬಂದಜವಹರಲಾಲ್ ನೆಹರುರವರಿಂದಇಲ್ಲಿಯವರೆಗೆಎಲ್ಲಾ ಪ್ರಧಾನ ಮಂತ್ರಿಗಳು ಸಂವಿಧಾನದಲ್ಲಿನ ಮುಖ್ಯ ಅಂಶಗಳನ್ನು ಈಡೇರಿಸುತ್ತಾ, ತಮ್ಮದೇಆದಕೊಡುಗೆ ನೀಡಿದ್ದಾರೆ.
ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯನ್ನುಒಪ್ಪಿಕೊಂಡು ಭಾರತದ ಸಾರ್ವಭೌಮತೆಗೆಧಕ್ಕೆ ಬಾರದಂತೆತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅಭಿವೃದ್ಧಿಯೆಡೆಗೆ ಸಾಗುತ್ತಿರುವರಾಜ್ಯ ನಮ್ಮಕರ್ನಾಟಕ. ಇಂದುಕರ್ನಾಟಕದ ಸಾಧನೆ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ.ಜ್ಞಾನಾಧಾರಿತ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪತ್ತು, ಪೂರ್ಣ ಸಾಮಾಜಿಕಚಿಂತನೆ, ಪ್ರಯೋಗಶೀಲ ಆಡಳಿತ ಕರ್ನಾಟಕದ ಹೆಗ್ಗುರುತಾಗಿದೆ.

ರಾಜ್ಯವನ್ನಾಳಿದ ಮುಖ್ಯಮಂತ್ರಿಗಳಾದ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ರವರಿಂದ ಇಂದಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ರವರೆಗೂ ಸಂವಿಧಾನದ ಆಶಯದಂತೆಕಾರ್ಯನಿರ್ವಹಿಸಿರುವುದನ್ನು ಕಾಣಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್‌ರವರ ನೇತೃತ್ವದ ನಮ್ಮ ಸರ್ಕಾರವು ಅಬಲರನ್ನು ಸಬಲರನ್ನಾಗಿ ಮಾಡಲು, ದೇಶದಲ್ಲಿ ಮಾದರಿಯಾಗಿ, ೧) ಗೃಹಜ್ಯೋತಿ, ೨) ಗೃಹಲಕ್ಷ್ಮೀ, ೩) ಶಕ್ತಿ, ೪) ಅನ್ನಭಾಗ್ಯ ಹಾಗೂ ೫) ಯುವನಿಧಿ ಕಾರ್ಯಕ್ರಮಗಳನ್ನು ಜಾರಿಗೆತಂದು ಪ್ರತಿಕುಟುಂಬಕ್ಕೆ ಕನಿಷ್ಠ ವರ್ಷಕ್ಕೆ ೪೦,೦೦೦ ರೂ.ಗಳ ಆದಾಯಗಳಿಸುವ ಅವಕಾಶಗಳನ್ನು ಕರ್ನಾಟಕದಜನರಿಗೆ ನಮ್ಮ ಸರ್ಕಾರ ಕಲ್ಪಿಸಿಕೊಟ್ಟಿದೆ.
ಚುನಾವಣೆ ಸಂದರ್ಭದಲ್ಲಿ ನೀಡಿದ ೫ ಗ್ಯಾರಂಟಿ ಭರವಸೆಗಳನ್ನು ೧೦೦ ಕ್ಕೆ ೧೦೦ ಈಡೇರಿಸಿದ್ದು, ನುಡಿದಂತೆ ನಡೆದಿದ್ದೇವೆ.ಅಭಿವೃದ್ಧಿದೃಷ್ಠಿಯಿಂದ ನಾವು ಜೊತೆಯಾಗಿ ಹೋಗೋಣ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಿಜಿಲ್ಲೆಯಅಭಿವೃದ್ಧಿಜೊತೆಗೆ ರಾಜ್ಯ ಮತ್ತುದೇಶದ ಯಶಸ್ಸಿಗೂ ಶ್ರಮಿಸೋಣವೆಂದು ಆಶಿಸುತ್ತಾ ಎಲ್ಲರಿಗೂ ಮತ್ತೊಮ್ಮೆ ಗಣರಾಜ್ಯೋತ್ಸವ ದ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿಜಿಲ್ಲಾಉಸ್ತುವಾರಿ ಸಚಿವರಾದರಾಮಲಿಂಗಾರೆಡ್ಡಿಅವರುಪಥಸಂಚಲನ, ಸಾಂಸ್ಕೃತಿಕಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಶಾಸಕರಾದಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷ ವಿಜಯಕುಮಾರಿ, ಜಿಲ್ಲಾಧಿಕಾರಿಡಾ.ಅವಿನಾಶ್ ಮೆನನ್‌ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರ್ತಿಕ್‌ರೆಡ್ಡಿ, ಜಿಲ್ಲಾಪಂಚಾಯತ್‌ಮುಖ್ಯಕಾರ್ಯನಿರ್ವಹಣಾಧಿಕಾರಿದಿಗ್ವಿಜಯ್ ಬೋಡ್ಕೆ, ಅಪರಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
