Friday, April 11, 2025
Google search engine

Homeರಾಜ್ಯಮೈಸೂರು ವಿಭಾಗ ನೈಋತ್ಯ ರೈಲ್ವೆಯ ಅತ್ಯಾಧುನಿಕ ಕ್ಯೂಆರ್ (QR) ಕೋಡ್ ಆಧಾರಿತ ಟಿಕೆಟಿಂಗ್ ವ್ಯವಸ್ಥೆ...

ಮೈಸೂರು ವಿಭಾಗ ನೈಋತ್ಯ ರೈಲ್ವೆಯ ಅತ್ಯಾಧುನಿಕ ಕ್ಯೂಆರ್ (QR) ಕೋಡ್ ಆಧಾರಿತ ಟಿಕೆಟಿಂಗ್ ವ್ಯವಸ್ಥೆ ಅನಾವರಣ

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಅತ್ಯಾಧುನಿಕ ಕ್ಯೂಆರ್ (QR) ಕೋಡ್ ಆಧಾರಿತ ಟಿಕೆಟಿಂಗ್ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ. ಪ್ರಯಾಣಿಕರು ಸಾಮಾನ್ಯ ವರ್ಗದ ಟಿಕೆಟ್‌ಗಳು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಖರೀದಿಸುವ ರೀತಿಯಲ್ಲಿ ಬದಲಾವಣೆ ತಂದಿದ್ದು, ಈ ನವೀನ ಸೌಲಭ್ಯವು ಈಗ 81 ನಿಲ್ದಾಣಗಳಾದ್ಯಂತ 94 ಅನ್‌ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (UTS) ಕೌಂಟರ್‌ಗಳಲ್ಲಿ ಲಭ್ಯವಿದೆ. ಇದು ತಡೆರಹಿತ ಮತ್ತು ಅನುಕೂಲಕರ ಅನುಭವವನ್ನು ನೀಡುತ್ತದೆ.

ಕ್ಯೂ.ಆರ್ (QR) ಕೋಡ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ, ಪ್ರಯಾಣಿಕರು ತಮ್ಮ ಮೊಬೈಲ್ ವ್ಯಾಲೆಟ್‌ಗಳು ಅಥವಾ UPI-ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಸಲೀಸಾಗಿ ಪಾವತಿಗಳನ್ನು ಮಾಡಬಹುದು, ಇದರಿಂದಾಗಿ ನಿಖರವಾದ ಮೌಲ್ಯವನ್ನು ನಿರ್ಧಿಷ್ಟಪಡಿಸುವ ಅಗತ್ಯವನ್ನು ನಿವಾರಣೆ ಮಾಡುವುದು. ಇದಲ್ಲದೆ, 25 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು (ಎಟಿವಿಎಂ) 12 ಸ್ಥಳಗಳಲ್ಲಿ ಕಾರ್ಯತಂತ್ರವಾಗಿ ಸ್ಥಾಪಿಸಲಾಗಿದೆ, ಪ್ರಯಾಣಿಕರು ಕಾಯ್ದಿರಿಸದ ಪ್ರಯಾಣದ ಟಿಕೆಟ್‌ಗಳು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಸುಲಭವಾಗಿ ಖರೀದಿಸಲು ಅನುವು ಮಾಡಿಕೊಡುತ್ತದೆ.

ಟಿಕೆಟ್ ಬುಕಿಂಗ್ ನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ನಾಲ್ಕು ನಿಲ್ದಾಣಗಳಲ್ಲಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ (PRS) ಟಿಕೆಟ್ ಬುಕಿಂಗ್‌ಗಾಗಿ‌ ಕ್ಯೂ.ಆರ್ (QR) ಕೋಡ್ ಸ್ಕ್ಯಾನ್ ಸೌಲಭ್ಯವನ್ನು ಸಹ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಇದು ಪ್ರಯಾಣಿಕರಿಗೆ ಯು.ಪಿ.ಐ ಅಪ್ಲಿಕೇಶನ್‌ಗಳ ಮೂಲಕ ಪಾವತಿಗಳನ್ನು ಮಾಡಲು ಮತ್ತು ಪಾವತಿ ದೃಢೀಕರಣದ ನಂತರ ಟಿಕೆಟ್‌ಗಳನ್ನು ಸ್ವೀಕರಿಸಲು, ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಈ ಪ್ರವರ್ತಕ ಉಪಕ್ರಮವು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ರೈಲ್ವೆ ಸಚಿವಾಲಯದ ಸಂಘಟಿತ ಪ್ರಯತ್ನಗಳ ಭಾಗವಾಗಿದೆ. ಕ್ಯೂ.ಆರ್ (QR) ಕೋಡ್ ಪಾವತಿ ಸೌಲಭ್ಯವು ಈಗ ಎಲ್ಲಾ ವಿಭಾಗೀಯ ಅಂಗಡಿಗಳು, ಆಹಾರ ಪ್ಲಾಜಾಗಳು, ಶೌಚಾಲಯಗಳ ಬಳಕೆಗೆ ಪಾವತಿ ಮಾಡಲು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚು ಉಪಯೋಗಕರವಾಗಿದೆ, ಈ ಬದಲಾವಣೆಯು ಸುಲಭವಾಗಿದ್ದು ಮತ್ತು ವಹಿವಾಟುಗಳನ್ನು ನಡೆಸಲು ಹೆಚ್ಚು ಅನುಕೂಲಕರವಾಗಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಶ್ರೀಮತಿ. ಶಿಲ್ಪಿ ಅಗರ್ವಾಲ್, ಪ್ರಯಾಣಿಕರ ಅನುಭವಗಳನ್ನು ಉನ್ನತೀಕರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ವಿಭಾಗದ ಅನಕ್ಷೇಪಣಿಯ ಬದ್ಧತೆಯನ್ನು ಒತ್ತಿಹೇಳಿದರು. ಕ್ಯೂ.ಆರ್ (QR) ಕೋಡ್ ಸೌಲಭ್ಯವು ಈ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular