ಬೆಂಗಳೂರು : ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ 2025-26ನೇ ಸಾಲಿನ ಕರ್ನಾಟಕ ರಾಜ್ಯ ಕೌಶಲ್ಯ ಓಲಂಪಿಕ್ಸ್ -2025ರ ಸ್ಪರ್ಧೆ ನಡೆಯಲಿದ್ದು, ಇದರ ಅಂಗವಾಗಿ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ. ಜಿ ಅವರು India Skills Karnataka-2025 ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು.
ಎಲ್ಲಾ ಕಾಲೇಜುಗಳು/ಶಿಕ್ಷಣ ಸಂಸ್ಥೆಗಳು/IITs/Polytechnics/Engineering/GTTC/KGTTI College ಗಳು ತಮ್ಮ ವಿದ್ಯಾರ್ಥಿಗಳಿಗೆ, Industries/ Establishments/ಉದ್ಯಮಗಳು ತಮ್ಮ ನುರಿತ ಕೌಶಲ್ಯಯುತ ನೌಕರರಿಗೆ/ಕೆಲಸಗಾರರಿಗೆ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಎಂದು ಸೂಚಿಸಿದರು.
ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿಲು ಇಚ್ಛಿಸುವಂತಹ ಅಭ್ಯರ್ಥಿಗಳು ವೆಬ್ ಸೈಟ್ www.skillindiadigital.gov.in ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಪ್ರಾಣೇಶ್, ಉಪ ಪ್ರಧಾನ ವ್ಯವಸ್ಥಾಪಕರು, ಕೆಎಸ್ಡಿಸಿ. ಕೌಶಲ್ಯ ಭವನ -560029 (ಮೊ.ಸಂ: 9686409096 ಅಥವಾ ಇ-ಮೇಲ್ indiaskillskart@gmail.com) ಗೆ ಸಂಪರ್ಕಿಸಬಹುದು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರವೀಂದ್ರನಾಥ್.ಎಂ.ಮೇಟಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಡಿ.ಎಲ್. ಕೃಷ್ಣಮೂರ್ತಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಛೇರಿಯ ಸಹಾಯಕ ಅಧಿಕಾರಿಗಳಾದ ಪ್ರಶಾಂತ್ ಖಾನ ಗೌಡ ಪಾಟೀಲ್ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.