ತುಮಕೂರು: ಕಾಂಗ್ರೆಸ್ ಸರ್ಕಾರ ಇನ್ನು ಆರೇ ತಿಂಗಳಲ್ಲಿ ಪತನವಾಗುತ್ತೆ ಅನ್ನೋ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಕುಮಾರಸ್ವಾಮಿ ಯಾವಾಗ ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ರೋ ನನಗೆ ಗೊತ್ತಿಲ್ಲ ಎಂದು ಹೇಳಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಲಿಂಗಾಯತರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಸಿಗ್ತಿಲ್ಲ ಅನ್ನೋ ಶಾಮನೂರು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದನ್ನೆಲ್ಲ ಮುಖ್ಯಮಂತ್ರಿಗಳು ಗಮನಿಸ್ತಾರೆ. ಅಂಥದ್ದೇನಾದ್ರೂ ಇದ್ರೆ ಸರಿಪಡಿಸಿಕೊಳ್ತಿವಿ. ಜಾತಿ ಆಧಾರದ ಮೇಲೆ ಅಧಿಕಾರಿಗಳನ್ನ ಹಾಕೋದು ನಮ್ಮ ಸರ್ಕಾರ ಮಾಡೋದಿಲ್ಲ. ಯಾರೂ ಸಮರ್ಥರಿದ್ದಾರೆ. ಯಾರು ಪ್ರಾಮಾಣಿಕರಿದ್ದಾರೆ. ಅವರು ಜನರ ಪರವಾಗಿ ಕೆಲಸ ಮಾಡ್ತಾರೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳನ್ನ ತಲುಪಿಸ್ತಾರೆ, ಆ ಆಧಾರದ ಮೇಲೆ ಅಧಿಕಾರಿಗಳನ್ನ ಆಯೋಜನೆ ಮಾಡ್ತಾರೆ. ಜಾತಿ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯುತ್ತೆ. ಆದ್ರೆ ಕೆಲಸ ಕೊಡುವಾಗ ಜಾತಿ ಆಧಾರದ ಮೇಲೆ ಪೋಸ್ಟಿಂಗ್ ಕೊಡೋದಿಲ್ಲ ಎಂದು ತಿಳಿಸಿದರು.
ಸಚಿವ ರಾಜಣ್ಣ ಮನೆಗೆ ಭೇಟಿ ವಿಚಾರವಾಗಿ ಮಾತನಾಡಿ, ರಾಜಣ್ಣ ಅವರಿಗೆ ಹುಷಾರಿಲ್ಲ, ಅವರ ಕಾಲಿಗೆ ಪೆಟ್ಟಾಗಿದೆ. ಸಣ್ಣ ಆಪರೇಷನ್ ಕೂಡ ಆಗಿತ್ತು. ಅದಕ್ಕೆ ನೋಡಿಕೊಂಡು ಹೋಗೋಣ ಅಂತಾ ಬಂದಿದ್ದೀವಿ ಎಂದರು.
ಮೂವರು ಡಿಸಿಎಂ ವಿಚಾರ ಕುರಿತು ಪ್ರತಿಕ್ರಿಯಿಸಿ, ಚರ್ಚೆ ಆಯ್ತಾ ಅನ್ನೋ ವಿಚಾರ. ನಾವಿಬ್ರು ಚರ್ಚೆ ಮಾಡಿದ್ರೆ ಏನ್ ಆಗುತ್ತೆ. ಚರ್ಚೆ ದೆಹಲಿಯಲ್ಲಿ ಆಗ್ಬೇಕು ಎಂದರು.
ಸಾಹಿತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ಹಿಂದೂ ಮುಖಂಡ ಶಿವಾಜಿ ರಾವ್ ಬಂಧನ ವಿಚಾರವಾಗಿ ಮಾತನಾಡಿ, ಸಾಹಿತಿಗಳು ತಮಗೆ ಬೆದರಿಕೆ ಕರೆ ಬರುವ ಕುರಿತು ನನ್ನ ಬಳಿ ಹೇಳಿಕೊಂಡಿದ್ರು. ನಾವು ಆ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ವಿ. ಸಿಸಿಬಿ ಪೊಲೀಸರು ದಾವಣಗೆರೆ ಮೂಲದವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಸಾಹಿತಿಗಳ ಅಹವಾಲು ನಾನು ಕೇಳಿದ್ದೆ. ಸಿಎಂಗೂ ಭೇಟಿ ಮಾಡಿ ಸಾಹಿತಿಗಳು ಬೆದರಿಕೆ ಕರೆ ಬಗ್ಗೆ ಹೇಳಿದ್ರು. ಅಧಿಕಾರಿಗಳು ಆ ಪತ್ರ ನೋಡಿ ಅರೆಸ್ಟ್ ಮಾಡಿದ್ದಾರೆ. ಅವರ ಹಿಂದೆ ಯಾರಿದ್ದಾರೆ. ಯಾರು ಬರೆಸ್ತಾ ಇದ್ದಾರೆ ಅನ್ನೋದು ತನಿಖೆ ಆಗುತ್ತದೆ. ಯಾವ ಸರ್ಕಾರ ಇದ್ರೂ ಕೂಡ ಅವರು ಬೆದರಿಕೆ ಹಾಕುತ್ತಾರೆ ಎಂದರು.