Saturday, April 5, 2025
Google search engine

Homeರಾಜ್ಯಸುದ್ದಿಜಾಲಕುಡಿತ,ಕೆಟ್ಟ ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ-ಶಿವರಾತ್ರಿದೇಶೀಕೇಂದ್ರ ಶ್ರೀಗಳು ಸಲಹೆ

ಕುಡಿತ,ಕೆಟ್ಟ ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ-ಶಿವರಾತ್ರಿದೇಶೀಕೇಂದ್ರ ಶ್ರೀಗಳು ಸಲಹೆ

ಹೊಸೂರು : ಕುಡಿತಕ್ಕೆ ದಾಸನಾದವರಿಂದ ಅನೇಕ ದುಷ್ಪರಿಣಾಮಗಳು ಉಂಟಾಗಲಿದ್ದು, ವ್ಯಕ್ತಿಯ ಘನತೆ ಹಾಗೂ ಆರೋಗ್ಯಕ್ಕೆ ಕುಂದು ಉಂಟಾಗುವುದರ ಜೊತೆಗೆ ಸಮಾಜದ ಸ್ವಾಸ್ತ್ಯವೂ ಆಳಾಗಲಿದೆ ಎಂದು ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಶ್ರೀಗಳು ಹೇಳಿದರು.
ಪಟ್ಟಣದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಶ್ರೀ ಮಠ ಮತ್ತು ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ನಡೆದ ಕುಡಿತ ಬಿಡಿಸುವ ೧೬ನೇ ಉಚಿತ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮಧ್ಯವ್ಯಸನಿಯರಿಂದ ಸಮಾಜಕ್ಕೆ ಆಗುವ ಸಮಸ್ಯೆಗಳಿಗಿಂತ ಹೆಚ್ಚಾಗಿ ಕುಟುಂಬದವರಿಗೆ ತೊಂದರೆಯಾಗಿದೆ ಇದನ್ನು ಯುವ ಜನತೆ ಅರಿಯಬೇಕು ಎಂದರು. ಮದ್ಯವ್ಯಸನದಿಂದ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಳು ಬೀರುವುದರಿಂದ ಕುಡಿತಕ್ಕೆ ದಾಸನಾದ ಕುಟುಂಬವೇ ನಾಶವಾಗುವ ಸಾಧ್ಯತೆಗಳು ಹೆಚ್ಚಿವೆ ಆದ್ದರಿಂದ ಕುಡಿತ ಸೇರಿದಂತೆ ಕೆಟ್ಟ ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಡಿ.ರವಿಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮದ್ಯಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ಮುಕ್ತರನ್ನಾಗಿ ಮಾಡುವ ಉದ್ಧೇಶದಿಂದ ಶಿಬಿರಗಳನ್ನು ಆಯೋಜಿಸಿರುವುದಕ್ಕೆ ಸುತ್ತೂರು ಶ್ರೀಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಕುಡಿತ ಬಿಡುವುದರಿಂದ ಆತನ ಕುಟುಂಬ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ

ಗಮನದಲ್ಲಿಟ್ಟುಕೊಂಡು ಶಿಬಿರಾರ್ಥಿಗಳು ಇತರರಿಗೂ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಸುತ್ತೂರು ಮಠದ ವತಿಯಿಂದ ಶ್ರೀಗಳು ಇಂತಹಾ ಹಲವು ಸಮಾಜಮುಖಿ ಸೇವಾ ಕಾರ್ಯ ಮಾಡುವುದರ ಜತೆಗೆ ದೇಶ ಮತ್ತು ವಿದೇಶಗಳಲ್ಲೂ ತಮ್ಮ ಸಂಸ್ಥೆಗಳನ್ನು ಆರಂಭಿಸಿ ಶಿಕ್ಷಣ, ಆರೋಗ್ಯ ಮತ್ತು ದಾಸ್ತೋವವನ್ನು ನಡೆಸುವ ಮೂಲಕ ಮನುಕುಲದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಬಣಿಸಿದರು.
ಸೆ.೨೩ರಿಂದ ಅ.೨ರರವರೆಗೆ ಒಟ್ಟು ಹತ್ತು ದಿನಗಳ ಕಾಲ ನಡೆದ ಶಿಬಿರದಲ್ಲಿ ೫೩ ಮಂದಿ ಮದ್ಯವ್ಯಸನಿಗಳು ಭಾಗವಹಿಸಿ ವ್ಯಸನಮುಕ್ತರಾಗಲು ಬಯಸಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಚುನಾಯಿತ ಜನಪ್ರತಿನಿಧಿಗಳು ಮತ್ತು ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೆಟ್ಟದಪುರ ಸಲೀಲಾಖ್ಯ ಮಠದ ಚನ್ನಬಸವ ದೇಶೀಕೇಂದ್ರ ಸ್ವಾಮೀಜಿ ಮತ್ತು ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎಸ್.ತೋಂಟದಾರ್ಯ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿದರು.
ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್, ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಣ್ಣಲಿಂಗಪ್ಪ, ಲಯನ್ಸ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಲೋಕೇಶ್, ಅಖಿಲ ಭಾರತ ವೀರಶೈವ ಲಿಂಗಾಯಿತ ಯುವ ಘಟಕದ ಮಾಜಿ ಅಧ್ಯಕ್ಷ ಎಲ್.ಪಿ.ರವಿಕುಮಾರ್, ಶಿವಾನುಭವ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾರವೀಂದ್ರ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular