ಬಿಹಾರ : ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಕ್ಫ್ ಮಸೂದೆಯನ್ನು ವಿರೋಧಿಸಬಹುದು ಎಂಬ ಈಗಲೂ ಇದೆ ಎಂದು ಕಾಂಗ್ರೆಸ್ ನಾಯಕ ತಾರಿಕ್ ಅನ್ವರ್ ಸೋಮವಾರ ಹೇಳಿದ್ದಾರೆ.
ಈದ್ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ನಮಾಝ್ ಮಾಡುತ್ತಿದ್ದ ಗಾಂಧಿ ಮೈದಾನದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಕೇಂದ್ರ ಸಚಿವ ತಾರಿಕ್ ಅನ್ವರ್ ಈ ಹೇಳಿಕೆ ನೀಡಿದ್ದಾರೆ. ಹಾಗೆಯೇ ಇತ್ತೀಚೆಗೆ ನಿತೀಶ್ ಕುಮಾರ್ ಆಯೋಜಿಸಿದ್ದ ಇಫ್ತಾರ್ ಕೂಟವನ್ನು ಹಲವು ಮುಸ್ಲಿಂ ನಾಯಕರು ಬಹಿಷ್ಕರಿಸಿದ ಬಗ್ಗೆಯೂ ತಾರಿಕ್ ಮಾತನಾಡಿದರು.
ತೀಶ್ ಕುಮಾರ್ ಅವರು ಹಲವು ವರ್ಷಗಳಿಂದ ಪಾಲಿಸುತ್ತಿದ್ದ ಸಂಪ್ರದಾಯವನ್ನು (ಇಫ್ತಾರ್ ಆಯೋಜನೆ) ಮುಂದುವರೆಸಿರುವುದು ಉತ್ತಮ ವಿಚಾರ. ಆದರೆ ಇದು ಬರೀ ನಾಟಕವಲ್ಲ ಎಂಬುದು ಖಚಿತವಾಗಬೇಕು. ಬಿಜೆಪಿಯ ನಿಲುವನ್ನು ತನ್ನದಾಗಿಸಿಕೊಳ್ಳದೆ ಮುಸ್ಲಿಮರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ತನ್ನ ಸರಿಯಾದ ನಿಲುವು ತೆಗೆದುಕೊಳ್ಳಬೇಕು” ಎಂದು ಹೇಳಿದರು.
“ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಅವರು ವಕ್ಫ್ ಮಸೂದೆಯನ್ನು ಬೆಂಬಲಿಸಲಾರರು ಎಂದು ನಾವಂದುಕೊಂಡಿದ್ದೆವು. ನರೇಂದ್ರ ಮೋದಿ ಸರ್ಕಾರವು ಸಂಸತ್ತಿನಲ್ಲಿ ವಕ್ಫ್ ಮಸೂದೆಯನ್ನು ಮಂಡಿಸಿದ ಸಂದರ್ಭದಲ್ಲಾದರೂ ನಿತೀಶ್ ಕುಮಾರ್ ತನ್ನ ಜಾತ್ಯಾತೀತ ನಿಲುವನ್ನು ತೆಗೆದುಕೊಳ್ಳಬಹುದು. ಮಸೂದೆಯನ್ನು ವಿರೋಧಿಸಬಹುದು ಎಂಬ ನಂಬಿಕೆಯಿದೆ” ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಬಿಜೆಪಿಯ ನಿಲುವನ್ನು ತನ್ನ ಪಕ್ಷದ ನಿಲುವನ್ನಾಗಿಸಿರುವ ನಿತೀಶ್ ಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಲವು ಮುಸ್ಲಿಮರು ನಿತೀಶ್ ಆಯೋಜಿಸಿದ ಇಫ್ತಾರ್ ಬಹಿಷ್ಕರಿಸಿದ್ದಾರೆ.