Monday, April 21, 2025
Google search engine

Homeರಾಜ್ಯಅಣಬೆ ಕಾರ್ಖಾನೆಯಿಂದ ಹೊರಸೂಸುವ ಮಾಲಿನ್ಯದಿಂದ ದುರ್ನಾತ: ಸ್ಥಳಕ್ಕೆ ಎಸ್ ಡಿಪಿಐ ನಿಯೋಗ ಭೇಟಿ, ಅಹವಾಲು ಸ್ವೀಕಾರ

ಅಣಬೆ ಕಾರ್ಖಾನೆಯಿಂದ ಹೊರಸೂಸುವ ಮಾಲಿನ್ಯದಿಂದ ದುರ್ನಾತ: ಸ್ಥಳಕ್ಕೆ ಎಸ್ ಡಿಪಿಐ ನಿಯೋಗ ಭೇಟಿ, ಅಹವಾಲು ಸ್ವೀಕಾರ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಮಹಾನಗರ ಪಾಲಿಕೆಯ ವಾಮಂಜೂರು ತಿರುವೈಲ್ ವಾರ್ಡಿನ ಆಶ್ರಯ ನಗರದಲ್ಲಿರುವ ಇನ್ನೂರಕ್ಕೂ ಹೆಚ್ಚು ಮನೆಗಳ ಸಮೀಪ ಇರುವ ಅಣಬೆ ಕಾರ್ಖಾನೆಯಿಂದ ಹೊರಸೂಸುವ ಮಾಲಿನ್ಯದಿಂದ ದುರ್ನಾತ ಬೀರುತ್ತಿದೆ.

ಇದರಿಂದ ಆಶ್ರಯ ನಗರದ  ಸುಮಾರು ಇನ್ನೂರಕ್ಕೂ ಹೆಚ್ಚು ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಎಸ್‌ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಇಂದು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಇವರ ನೇತೃತ್ವದ ನಿಯೋಗದೊಃದಿಗೆ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿ ಅಲ್ಲಿನ ನಾಗರಿಕರ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಬಲಾಢ್ಯ ಶಕ್ತಿಗಳಿಗೆ ಮಣಿಯದೆ ಜನರಿಗೆ ಮಾರಕವಾದ ಅಣಬೆ ಫ್ಯಾಕ್ಟರಿಗೆ ಬೀಗ ಜಡಿದು ಆಶ್ರಯ ನಗರದ ನಿವಾಸಿಗಳ ನೆಮ್ಮದಿಯ ಬದುಕಿಗೆ ಸಹಕಾರ ನೀಡಬೇಕು ಇಲ್ಲದಿದ್ದರೆ ಈ ವಿಚಾರದಲ್ಲಿ ತೀವ್ರ ರೀತಿಯಾದಂತಹ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅನ್ವರ್ ಸಾದತ್ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಸ್ಥಳ ಪರಿಶೀಲನೆ ನಡೆಸಿದ ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ ಹಾಗೂ ಸ್ಥಳೀಯ ಮುಖಂಡರಾದ ರಿಯಾಜ್ ವಾಮಂಜೂರು ಇಕ್ಬಾಲ್ ವಾಮಂಜೂರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular