Sunday, April 20, 2025
Google search engine

Homeಅಪರಾಧತಿಂಗಳೊಳಗೆ ಕದ್ದ ವಸ್ತು ಹಿಂತಿರುಗಿಸುವೆ: ಪತ್ರ ಬರೆದು ಮನೆಯ ಬಾಗಿಲು ಮುರಿದು ಕಳ್ಳತನ

ತಿಂಗಳೊಳಗೆ ಕದ್ದ ವಸ್ತು ಹಿಂತಿರುಗಿಸುವೆ: ಪತ್ರ ಬರೆದು ಮನೆಯ ಬಾಗಿಲು ಮುರಿದು ಕಳ್ಳತನ

ತಮಿಳುನಾಡು: ರಾಜ್ಯದಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ನಡೆದಿರುವುದು ಬೆಳಕಿಗೆ ಬಂದಿದೆ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸಿರುವ ಘಟನೆ ತಮಿಳುನಾಡಿನ ಮೆಗ್ನಾನಪುರಂನ ಸಾತಾಂಕುಳಂ ಪ್ರದೇಶದಲ್ಲಿ ನಡೆದಿದೆ.

ಕಳ್ಳತನ ನಡೆಸಿರುವ ಕಳ್ಳ ಮನೆಯವರಿಗೆ ಪತ್ರವೊಂದನ್ನು ಬರೆದಿದ್ದಾನೆ, ಕ್ಷಮಿಸಿ ನಾನು ಕದ್ದಿರುವ ವಸ್ತುಗಳನ್ನು ಒಂದು ತಿಂಗಳೊಳಗೆ ಹಿಂತಿರುಗಿಸುವೆ ನನ್ನನು ಹುಡುಕುವ ಪ್ರಯತ್ನ ಮಾಡಬೇಡಿ ಅಲ್ಲದೆ ಪೊಲೀಸರಿಗೆ ದೂರು ನೀಡಬೇಡಿ ನನ್ನ ಮನೆಯಲ್ಲಿರುವ ಸಮಸ್ಯೆಯಿಂದ ನಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಬರೆದುಕೊಂಡಿದ್ದಾನೆ.

ಚೆನ್ನೈನಲ್ಲಿರುವ ತಮ್ಮ ಮಗನನ್ನು ಭೇಟಿಯಾಗಲು ನಿವೃತ್ತ ಶಿಕ್ಷಕ ದಂಪತಿ ನಿರ್ಧರಿಸಿದ್ದಾರೆ ಅದರಂತೆ ಮನೆಯ ಕೆಲಸ ನೋಡಿಕೊಳ್ಳಲು ಸೆಲ್ವಿ ಎಂಬ ಮಹಿಳೆಯನ್ನು ನೇಮಿಸಿ ಜೂನ್ 17 ದಂಪತಿಗಳು ಚೆನ್ನೈಗೆ ತೆರಳಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಬೆಳಿಗ್ಗೆ ಮನೆಕೆಲಸಕ್ಕೆ ಬಂದ ಮಹಿಳೆ ಶಾಕ್ ಆಗಿದ್ದಾಳೆ ಕಾರಣ ಮನೆಯ ಬಾಗಿಲು ಮುರಿದು ಕಳ್ಳತನ ನಡೆದಿತ್ತು ಇದರಿಂದ ಗಾಬರಿಗೊಂಡ ಸೆಲ್ವಿ ಚೆನ್ನೈ ಗೆ ತೆರಳಿದ ದಂಪತಿಗೆ ಮಾಹಿತಿ ನೀಡಿದ್ದಾರೆ ಕೂಡಲೇ ಊರಿಗೆ ಬಂದ ದಂಪತಿ ಮನೆಯನ್ನು ಪರಿಶೀಲನೆ ನಡೆಸಿದ ವೇಳೆ 60 ಸಾವಿರ ರೂ., 12 ಗ್ರಾಂ ಚಿನ್ನಾಭರಣ ಹಾಗೂ ಒಂದು ಜೊತೆ ಬೆಳ್ಳಿಯ ಕಾಲುಂಗುರ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ, ಅಲ್ಲದೆ ಹತ್ತಿರದ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದಾರೆ, ಘಟನೆ ಸಂಬಂಧ ಮನೆ ಪರಿಶೀಲನೆಗೆ ಬಂದ ಪೊಲೀಸರಿಗೆ ಮನೆಯಲ್ಲಿ ಪತ್ರವೊಂದು ಲಭಿಸಿದೆ ಇದನ್ನು ಓದಿದ ಬಳಿಕ ಗೊತ್ತಾಯಿತು ಇದು ಕಳ್ಳನೇ ಬರೆದ ಪತ್ರವಾಗಿತ್ತು, ಇದರಲ್ಲಿ ಆತ ನನ್ನನ್ನು ಕ್ಷಮಿಸಿ ನನ್ನ ಮನೆಯಲ್ಲಿ ಸಮಸ್ಯೆ ಇರುವುದರಿಂದ ನಾನು ನಿಮ್ಮ ಮನೆಯಲ್ಲಿ ಕಳ್ಳತನ ನಡೆಸಿದ್ದೇನೆ ಆದರೆ ಕದ್ದ ವಸ್ತುಗಳನ್ನು ಒಂದು ತಿಂಗಳ ಒಲೆಗೆ ನಿಮಗೆ ಒಪ್ಪಿಸುತ್ತೇನೆ ಎಂದು ಪತ್ರ ಬರೆದು ನಗ ನಗದು ದೋಚಿ ಹೋಗಿದ್ದಾನೆ.

ಘಟನೆ ಸಂಬಂಧ ಮೆಗ್ನಾನಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಕೇರಳದ ಪಾಲಕ್ಕಾಡ್ ನಲ್ಲಿ ಇಂತಹುದೇ ಘಟನೆಯೊಂದು ನಡೆದಿದ್ದು, ಮೂರು ವರ್ಷದ ಮಗುವಿನ ಚಿನ್ನದ ಸರವನ್ನು ಕದ್ದ ಕಳ್ಳನೊಬ್ಬ ಅದನ್ನು ಮಾರಿ ಬಂದ ಹಣವನ್ನು ಕ್ಷಮಾಪಣೆ ಪತ್ರದೊಂದಿಗೆ ಹಿಂದಿರುಗಿಸಿದ್ದಾನೆ.

RELATED ARTICLES
- Advertisment -
Google search engine

Most Popular