ಉತ್ತರ ಪ್ರದೇಶ: ಸಂಭಾಲ್ನಲ್ಲಿರುವ ಜಾಮಾ ಮಸೀದಿ ಸಮೀಕ್ಷೆಗೆ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷಾ ತಂಡ ಒಳಗಡೆ ಸಮೀಕ್ಷೆ ನಡೆಯುತ್ತಿದ್ದಾಗ ಘೋಷಣೆಗಳ ನಡುವೆ ಜನರು ಕಲ್ಲು ತೂರಾಟ ನಡೆಸಿದ್ದಾರೆ.
ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಬೆಳಗ್ಗೆ 7:30 ಕ್ಕೆ ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆಯ ನಂತರ ಸಂಭಾಲ್‌ನಲ್ಲಿ ಕಲ್ಲು ತೂರಾಟ ಪ್ರಾರಂಭವಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ), ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ಮತ್ತು ಐದು ಪೊಲೀಸ್ ಠಾಣೆಗಳ ಅಧಿಕಾರಿಗಳು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳದಲ್ಲಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಪ್ರಯೋಗಿಸಿದರು. ಪರಿಸ್ಥಿತಿ ಉದ್ವಿಗ್ನವಾಗಿದೆ.
ಈ ಸ್ಥಳವು ಮೂಲತಃ ಹಿಂದೂ ನಂಬಿಕೆಗೆ ಪ್ರಾಮುಖ್ಯತೆಯ ಪುರಾತನ ದೇವಾಲಯವಾಗಿದೆ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಯ ನಂತರ ಸಂಭಾಲ್‌ನ ನ್ಯಾಯಾಲಯವು “ವೀಡಿಯೋ ಮತ್ತು ಛಾಯಾಗ್ರಹಣ” ಬಳಸಿಕೊಂಡು ಜಿಲ್ಲೆಯ ಮಸೀದಿಯ ಸಮೀಕ್ಷೆಗೆ ಆದೇಶಿಸಿದೆ.