ಪಾಂಡವಪುರ:ಸಹಕಾರ ಸಂಘಗಳಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ಸಂಘಗಳ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.
ತಾಲೂಕಿನ ಚಲ್ಲರಹಳ್ಳಿಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಮನ್ ಮುಲ್ ಮತ್ತು ಕೆಎಂಎಫ್ ವತಿಯಿಂದ ನಡೆದ ಕ.ಹಾ.ಮ ಸ್ಟೆಪ್ ಯೋಜನೆಯಡಿ ಹಾಲು ಉತ್ಪಾದಕರಿಗೆ ನೀಡುವ ಬಡ್ಡಿರಹಿತ ಸಾಲದ ಚೆಕ್ ವಿತರಣೆ ಮಾಡಿ ಬಳಿಕ ಮಾತನಾಡಿದರು
ಚಲ್ಲರಹಳ್ಳಿಕೊಪ್ಪಲು ಗ್ರಾಮದಲ್ಲಿ ಡೇರಿ ಇಲ್ಲದ ಪರಿಣಾಮವಾಗಿ ಗ್ರಾಮದ ರೈತರು ಪಕ್ಕದ ತಾಳೆಕೆರೆ ಗ್ರಾಮದ ಡೇರಿಗೆ ಹಾಲು ತೆಗೆದುಕೊಂಡು ಹೋಗಿ ಹಾಕುವ ಸ್ಥಿತಿ ಇತ್ತು. ನಾನು ನಿರ್ದೇಶಕನಾದ ಬಳಿಕ ಗ್ರಾಮಕ್ಕೆ ಡೇರಿ ಮಂಜೂರು ಮಾಡಿಕೊಟ್ಟು ಇದೀಗ ಕೆಎಂಎಫ್‌ನ ಸ್ಟೆಪ್ ಯೋಜನೆಯಡಿ ಸಾಲಸೌಲಭ್ಯ
ವನ್ನು ಸಹ ಮಂಜೂರು ಮಾಡಿಕೊಟ್ಟಿದ್ದೇನೆ.ಆದರೂ ಸಹ ಗ್ರಾಮದ ಕೆಲವು ತಾಳೆಕೆರೆ ಡೇರಿ ಹಾಕುತ್ತಿರುವುದು ಸರಿಯಲ್ಲ. ಗ್ರಾಮದಲ್ಲಿಯೇ ಇರುವ ಡೇರಿಯ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಸ್ಟೆಪ್ ಯೋಜನೆಯಡಿ ನೀಡುತ್ತಿರುವ ಸಾಲದ ಸೌಲಭ್ಯವನ್ನು ಪಡೆಯುವ ರೈತರು ಕಡ್ಡಾಯವಾಗಿ ಹಸು ಖರೀದಿಸಬೇಕು. ನಾವು ಕೊಡುವ ಬಡ್ಡಿ ರಹಿತ ೨೫ ಸಾವಿರದಿಂದ ಹಸು ಖರೀದಿಸಲು ಕಷ್ಟ ಎನ್ನುವುದು ನನಗೆ ಗೊತ್ತು. ಮೇಲುಕೋಟೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಮತ್ತಷ್ಟು ಸಾಲಸೌಲಭ್ಯ ನೀಡುತ್ತೇನೆ ಎರಡು ಸೇರಿ ಹಸು ಖರೀದಿಸಿ ಹೈನುಗಾರಿಕೆ ನಡೆಸಿ ಎಂದು ಸಲಹೆ ನೀಡಿದರು.
ಮನ್ ಮುಲ್ ಒಕ್ಕೂಟದಿಂದ ಸಿಗುವ ಸೌಲಭ್ಯಗಳು ದೊರೆಯಬೇಕಾದರೆ ಗ್ರಾಮದ ಡೇರಿಯಲ್ಲಿ ಕನಿಷ್ಠ ಪ್ರತಿದಿನಿ ೨೦೦ ಲೀಟರ್ ಹಾಲು ಉತ್ಪಾದನೆಯಾ
ಬೇಕು.ಹಾಗಾಗಿ ಪ್ರತಿಯೊಬ್ಬರು ಗ್ರಾಮದಲ್ಲಿ ಹೈನುಗಾರಿಕೆ ಹೆಚ್ಚುಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ವ್ಯವಸ್ಥಾಪಕ ಪ್ರಭಾಕರ್ ಮಾತನಾಡಿ,ಹೈನುಗಾರಿಕೆ ರೈತರ ಆರ್ಥಿಕ ಸ್ವಾವಲಂಭಿಗೆ ಸಹಕಾರಿಯಾಗಿದೆ.ಪ್ರತಿಯೊಬ್ಬರು ರೈತರು ಹೈನೋಧ್ಯಮದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು.ಜತೆಗೆ ಡೇರಿಗಳಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಹೇಳಿದರು.
ಮನ್ ಮುಲ್ ಒಕ್ಕೂಟಕ್ಕೆ ದಿನ ನಿತ್ಯ ೯.೯೩ ಲಕ್ಷ ಹಾಲು ಉತ್ಪಾದನೆಯಾಗುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಡೇರಿಗಳಿಗಿಂತ ಮುಂದಿನ ದಿನಗಳಲ್ಲಿ ಮಂಡ್ಯ ಒಕ್ಕೂಟ ಹೆಚ್ಚಿನ ರೀತಿಯಲ್ಲಿ ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಜಿಲ್ಲೆಯ ಎಲ್ಲಾ ರೈತರು ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ಇದೇವೇಳೆ ಚಲ್ಲರಹಳ್ಳಿಕೊಪ್ಪಲು ಡೇರಿಯಿಂದ ಸ್ಟೆಪ್ ಯೋಜನೆಗೆ ಆಯ್ಕೆಯಾದ ಮಹಿಳಾ ಫಲಾನುಭವಿಗಳಿಗೆ ತಲಾ ೨೫ ಸಾವಿರದ ಬಡ್ಡಿ ರಹಿತ ಹಣದ ಚೆಕ್ ಗಳನ್ನು ವಿತರಣೆ ಮಾಡಲಾಯಿತು.
ಸಂದರ್ಭದಲ್ಲಿ ಮನ್ ಮುಲ್ ಉಪವ್ಯವಸ್ಥಾಪಕರಾದ ಆರ್.ಪ್ರಸಾದ್, ಭರತ್, ಮಾರ್ಗ ವಿಸ್ತರ್ಣಾಧಿಕಾರಿ ಮಂಜುನಾಥ್, ಸುಕನ್ಯ, ಡೇರಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಲಕ್ಷö್ಮಮ್ಮ, ನಿರ್ದೇಶಕರಾದ ಭಾಗ್ಯಮ್ಮ, ಗಂಗಮ್ಮ, ಮಾಯಮ್ಮ, ತಾಯಮ್ಮ, ಸಾಕಮ್ಮ, ಮೀನಾಕ್ಷಿ, ಪುಟ್ಟಲಿಂಗಮ್ಮ, ಅರಸಮ್ಮ, ಕಾರ್ಯದರ್ಶಿ ಲಕ್ಷ್ಮೀದೇವಿ ಸೇರಿದಂತೆ ಎಲ್ಲಾ ನಿರ್ದೇಶಕರು ಹಾಜರಿದ್ದರು.