ಲಾವೋಸ್: ಗಾಝಾದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು ಎಂದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ನೀಡುವುದನ್ನು ಭಾರತವು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
ಲಾವೋಶ್‌ನಲ್ಲಿ ನಡೆಯುತ್ತಿರುವ ಆಗ್ನೇಯ ಏಷ್ಯಾದ ರಾಷ್ಟ್ರಗಳ (ಎಎಸ್‌ಇಎಎನ್) ವಿದೇಶಾಂಗ ಸಚಿವರ ೧೪ನೇ ಶೃಂಗಸಭೆಯಲ್ಲಿ ಇಸ್ರೇಲ್-ಹಮಾಸ್ ಹಾಗೂ ರಷ್ಯಾ-ಉಕ್ರೇನ್ ಯುದ್ಧಗಳಿಗೆ ಸಂಬಂಧಿಸಿ ಭಾರತದ ನಿಲುವನ್ನು ಪ್ರಕಟಿಸುವಾಗ ಜೈಶಂಕರ್ ಹೀಗೆ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಮಾತುಕತೆಯ ಮೂಲಕ ಕೊನೆಗಾಣಿಸಬೇಕು. ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂದೂ ಅವರು ಆಗ್ರಹಿಸಿದರು. ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಗೆ (ಯುಎನ್‌ಆರ್‌ಡ್ಲ್ಯುಎ) ಭಾರತವು ಜುಲೈ ೧೫ರಂದು ೨.೫ ಲಕ್ಷ ಡಾಲರ್ (ಸುಮಾರು ೨೦.೯೩ ಕೋಟಿ ರೂ.) ದೇಣಿಗೆ ನೀಡಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಎಂಬ ದ್ವಿದೇಶ ನೀತಿಯನ್ನು ಭಾರತವು ಹಲವು ಬಾರಿ ಪ್ರತಿಪಾದಿಸಿದೆ.