Monday, April 21, 2025
Google search engine

Homeರಾಜಕೀಯನೆನ್ನೆ ಸುರಿದ ಬಿರುಗಾಳಿ ಮಳೆಗೆ ಮಂಡ್ಯದಲ್ಲಿ ಅವಾಂತರ: ಮುರಿದ ಕೊಂಬೆಗಳನ್ನ ತೆರವು ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ

ನೆನ್ನೆ ಸುರಿದ ಬಿರುಗಾಳಿ ಮಳೆಗೆ ಮಂಡ್ಯದಲ್ಲಿ ಅವಾಂತರ: ಮುರಿದ ಕೊಂಬೆಗಳನ್ನ ತೆರವು ಮಾಡಲು ಅಧಿಕಾರಿಗಳ ನಿರ್ಲಕ್ಷ್ಯ

ಮಂಡ್ಯ: ನೆನ್ನೆ ಸುರಿದ ಬಾರಿ ಬಿರುಗಾಳಿ ಮಳೆಗೆ ಮಂಡ್ಯದಲ್ಲಿ ಅವಾಂತರ ಸೃಷ್ಠಿಯಾಗಿದ್ದು,  ನಗರದ ಹಲವೆಡೆ ಬಾರಿ ಗಾತ್ರದ ಮರಗಳು ಮುರಿದು ಬಿದ್ದಿವೆ.

ನಗರದ ಬಂದ್ದೀಗೌಡ ಬಡಾವಣೆಯ ಮೂರನೇ ಕ್ರಾಸ್ ನಲ್ಲಿ ಮರದ ಕೊಂಬೆ ಮುರಿದು ಬಿದ್ದಿದೆ. ಮುರಿದ ಕೊಂಬೆಗಳನ್ನ ತೆರವು ಮಾಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಬಡಾವಣೆ ನಿವಾಸಿಗಳು ಜೀವ ಭಯದಲ್ಲೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.

ಅರಣ್ಯಾಧಿಕಾರಿ ಸಿಬ್ಬಂದಿಗಳು ಹಾಗೂ ಚೆಸ್ಕಾಂ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಸಬೂಬು ಹೇಳಿಕೊಂಡು ಮುರಿದ ಕೊಂಬೆ ತೆರವು ಮಾಡಲು ನಿರ್ಲಕ್ಷ್ಯವಹಿಸಿದ್ದಾರೆ.

ಜನರ ಎದುರೇ ನೀವು ಮಾಡಿ, ನೀವು ಮಾಡಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಲೋಕೇಶ್ ಹಾಗೂ ಎಇಇ ಮೋಹನ್ ರಾಜ್ ನಡುವೆ ವಾಗ್ವಾದ ಏರ್ಪಟ್ಟಿದೆ.

ಮಾಜಿ ನಗರಸಭೆ ಸದಸ್ಯ ನಹೀಮ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಶಾಸಕ ಗಣಿಗ ರವಿಕುಮಾರ್ ಸೂಚನೆ ಮೇರೆಗೆ ಸಿಬ್ಬಂದಿಗಳು ಕೆಲಸ ಆರಂಭಿಸಿದ್ದಾರೆ.

ಬಳಿಕ ಮರದ ಬಳಿ ಹಾದುಹೋಗಿರುವ ವಿದ್ಯುತ್ ಲೈನ್ ತೆಗೆದು ಮುರಿದ ಕೊಂಬೆ ತೆರವು ಕಾರ್ಯಾಚರಣೆ ಮಾಡಿದ್ದಾರೆ.

ನೆನ್ನೆ ಸುರಿದ ಮಳೆಗೆ ಮರದ ಕೊಂಬೆ ಮುರಿದಿದೆ ತೆರವು ಮಾಡಲು ಸಬೂಬು ಹೇಳುತ್ತಾರೆ. ಜನರ ಜೀವ ಹೋದರೇ ಯಾರು ಹೊಣೆಯಾಗಿತ್ತಾರೆ? ನಮ್ಮ ಶಾಸಕರು ತಕ್ಷಣವೇ ಕ್ರಮ ವಹಿಸಿ ಮರ ತೆರವು ಮಾಡಿಸಿದ್ದಾರೆ ಅವರಿಗೆ ಧನ್ಯವಾದ ಎಂದ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular