Saturday, April 19, 2025
Google search engine

Homeಅಪರಾಧನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ

ಮೈಸೂರು:ಮೈಸೂರು ಜಿಲ್ಲೆ, ಟಿ ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮದಲ್ಲಿ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ನಡೆದಿದೆ. ಕಾರವಾರದ ಇಂಜಿನಿಯರಿಂಗ್ ವಿದ್ಯಾರ್ಥಿ ಅಮಿತ್ ಮೃತ ದುರ್ದೈವಿ.

ಆಗಸ್ಟ್ 15ರ ಸ್ವತಂತ್ರ ದಿನಾಚರಣೆ ದಿನದಂದು ಈ ಘಟನೆ ನಡೆದಿದ್ದು, 10 ದಿನಗಳಾದರು ಅಮಿತ್ ನ ಶವ ಸಿಕ್ಕಿಲ್ಲ. ಅಮಿತ್ ಶವ ಪತ್ತೆಗೆ ತಲಕಾಡಿಗೆ ಎನ್ ಡಿ ಆರ್ ಎಫ್(NDRF) ತಂಡ ಆಗಮಿಸಿದ್ದು ಮೈಸೂರು, ಕೊಡಗು ಪೊಲೀಸರು ಹಾಗೂ ಎನ್ ಡಿ ಆರ್ ಎಫ್(NDRF) ನ 60 ಜನರಿಂದ ಅಮಿತ್ ನ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ಕೊಡಗು ಎಸ್ ಪಿ ರಾಮರಾಜನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಹತ್ತು ದಿನಗಳ ಬಳಿಕ ಶವಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರೆದಿದೆ, ಆದರೆ ಇನ್ನು ವಿದ್ಯಾರ್ಥಿ ಅಮಿತ್ ಮೃತ ದೇಹ ಪತ್ತೆ ಆಗಿರುವುದಿಲ್ಲ.

RELATED ARTICLES
- Advertisment -
Google search engine

Most Popular