Sunday, April 20, 2025
Google search engine

Homeಅಪರಾಧಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ: ತಲೆಗೆ ಗಂಭೀರ ಗಾಯ

ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ: ತಲೆಗೆ ಗಂಭೀರ ಗಾಯ

ಮುಂಡಗೋಡ : ವಿದ್ಯಾರ್ಥಿನಿಯೊಬ್ಬಳು ಚಲಿಸುತ್ತಿದ್ದ ಬಸ್ಸಿನಿಂದ ಇಳಿಯುವಾಗ ಬಿದ್ದು ತಲೆಗೆ ಗಂಭೀರ ಗಾಯವಾದ ಘಟನೆ ಶುಕ್ರವಾರ ಪಟ್ಟಣ ಪಂಚಾಯಿತಿಯ ಆಟೋ ನಿಲ್ದಾಣದ ಬಳಿ ನಡೆದಿದೆ.

ಬಾಚಣಕಿ ಗ್ರಾಮದ ಆಶಾ ಹೊತಗಣ್ಣನವರ ಗಾಯಗೊಂಡ ವಿದ್ಯಾರ್ಥಿನಿ.

ಆಶಾ ಇಲ್ಲಿನ ಪ್ರಥಮ ದರ್ಜೆಯ ಬಿಎ ವಿದ್ಯಾರ್ಥಿನಿಯಾಗಿದ್ದು. ಬಾಚಣಕಿ ಗ್ರಾಮದಿಂದ ಕಾಲೇಜಿಗೆ ಬರಲು ಹುಬ್ಬಳ್ಳಿ ಶಿರಶಿ ಮಾರ್ಗದ ಬಸ್ಸಿಗೆ ಈ ವಿದ್ಯಾರ್ಥಿನಿ ಹತ್ತಿದ್ದಾಳೆ.‌ ಇನ್ನೇನು ತಾನು ಇಳಿಯುವ ನಿಲ್ದಾಣ ಬಂತು ಎಂದು ಚಲಿಸುತ್ತಿರುವ ಬಸ್ಸಿನಿಂದ ಇಳಿಯಲು ಮುಂದಾದಾಗ ಆಯಾ ತಪ್ಪಿ ಬಿದ್ದಿದ್ದಾಳೆ ಎನ್ನಲಾಗಿದೆ. ಇದರ ಪರಿಣಾಮ ವಿದ್ಯಾರ್ಥಿನಿಯ ತಲೆಗೆ ಗಂಭೀರ ಗಾಯವಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

RELATED ARTICLES
- Advertisment -
Google search engine

Most Popular