Sunday, April 20, 2025
Google search engine

Homeರಾಜ್ಯವಿದ್ಯಾರ್ಥಿಗಳು ಹಿರಿಯ ಸಮಾಜ ಸಾಧಕರ ಬಗ್ಗೆ ಅರಿವುಮೂಡಿಸಿಕೊಂಡು, ಸ್ಮರಿಸಿ: ಎಂ ಸ್ವರೂಪ್ ಚಂದ್ 

ವಿದ್ಯಾರ್ಥಿಗಳು ಹಿರಿಯ ಸಮಾಜ ಸಾಧಕರ ಬಗ್ಗೆ ಅರಿವುಮೂಡಿಸಿಕೊಂಡು, ಸ್ಮರಿಸಿ: ಎಂ ಸ್ವರೂಪ್ ಚಂದ್ 

ವಿದ್ಯಾರ್ಥಿಗಳು ಹಿರಿಯ ಸಮಾಜ ಸಾಧಕರುಗಳ ಬಗ್ಗೆ  ಅರಿವು ಮೂಡಿಸಿಕೊಂಡು ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು  ಎಂ. ಹೆಚ್.ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ ಸ್ವರೂಪ್ ಚಂದ್  ಹೇಳಿದರು.

ಪಟ್ಟಣದ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಆಯೋಜಿಸಿದ್ದ ಕೋಣಸಾಲೆ ಪಟೇಲ್ ಕೆ. ತಮ್ಮಣ್ಣ ಗೌಡರ ಜನ್ಮ ದಿನಾಚರಣೆ ವೇಳೆ ಅವರು ಮಾತನಾಡಿದರು.

ಹಿಂದಿನ ಸಹಕಾರ ಮನೋಭಾವನೆಗೆ ಹಾಗೂ ಸಂಘ ಸಂಸ್ಥೆಗಳ ಬೆಳವಣಿಗೆಯಲ್ಲಿ ಹಿರಿಯರು ಶ್ರಮಿಸಿದ ಫಲವಾಗಿ ನಾವು ಹಲವಾರು ಪ್ರಯೋಜನಗಳನ್ನ ಪಡೆಯುತ್ತಿದ್ದು ಸ್ವಾವಲಂಭಿಗಳಾಗಿ ರೂಪುಕೊಳ್ಳಲು ಸಹಕಾರಿಯಾಗಿದೆ ಎಂದ ಅವರು ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಅವರ ಆದರ್ಶಗಳನ್ನ ಸರಿಯಾದ ರೀತಿಯಲ್ಲಿ ಅರಿವು ಮೂಡಿಸಿಕೊಂಡು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರೀಕರಾಗಿ ರೂಪುಗೊಳ್ಳಬೇಕೆಂದು ಕಿವಿಮಾತು ಹೇಳಿದರು.

ತಮ್ಮಣ್ಣಗೌಡರು ತಾಲೂಕಿನ ಪ್ರಥಮ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದು ಜನರ  ಹಾಗೂ ರೈತರ ಸಮಸ್ಯೆಗಳನ್ನ ಅರಿತವರಾಗಿದ್ದರ ಫಲವಾಗಿ ಅವರು ತಾಲೂಕಿನಲ್ಲಿ ಪ್ರಥಮ ಬಾರಿಗೆ ಸ್ಥಾಪಿತವಾದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಮಿತಿ ಇಂದಿಗೂ ಕೂಡ ರೈತರ ಸಹಾಯಕ್ಕೆ ಶ್ರಮಿಸುತ್ತಿರುವುದು ಅವರ ರೈತ ಪರ ಕಾಳಜಿಗೆ ಹಿಡಿದ ಕನ್ನಡಿ ಎಂದು ಬಣ್ಣಿಸಿದರು.

ಗುಮಾಸ್ತರಾಗಿದ್ದ ತಮ್ಮಣ್ಣ ಗೌಡರು ತಾವು ತಮ್ಮ ಕುಟುಂಬದ ಏಳಿಗೆಗೆ ಮಾತ್ರ ಚಿಂತಿಸದೆ ಸಮಾಜದ ರೈತರ ಮಕ್ಕಳ ಏಳಿಗಾಗಿ ಶ್ರಮಿಸಿದ್ದರ ಫಲವಾಗಿ ಇಂದು ತಾಲೂಕಿನಾದ್ಯಂತ ಹಲವಾರು ಸಹಕಾರ ಸಂಘಗಳು ಬೆಳವಣಿಗೆ ಹೊಂದಲು ಸಹಕಾರಿಯಾಗಿದೆ ಎಂದ ಅವರು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣವನ್ನ ಪಡೆದು ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಹಿರಿಯರಿಗೆ ಹಾಗೂ ತಂದೆ ತಾಯಿಗಳಿಗೆ ಒಳ್ಳೆಯ ಹೆಸರನ್ನು ತರುವಂತವರಾಗಬೇಕೆಂದು ಅವರು ಹೇಳಿದರು.

ಈ ವೇಳೆ ಪ್ರಾಂಶುಪಾಲರುಗಳಾದ ಜಿ.ಎಸ್ ಶಂಕರೇಗೌಡ, ಯು.ಎಸ್ ಶಿವಕುಮಾರ್ ಉಪಪ್ರಾಂಶುಪಾಲರುಗಳಾದ ಪ್ರಕಾಶ್, ನಂದಿನಿ ಮುಖ್ಯ ಶಿಕ್ಷಕರಾದ ಎಂ.ಟಿ.ಚಂದ್ರಶೇಖರ್, ಕೆ. ಎನ್.ವರದರಾಜು, ಅಶ್ವಿನಿ, ಉಪನ್ಯಾಸಕರುಗಳಾದ ಎಚ್.ಎಸ್ ಪಂಚಲಿಂಗೇಗೌಡ, ಪ್ರೇಮಕುಮಾರಿ, ಮೋಹನ್ ಕುಮಾರ್, ಜಯವರ್ಧನ್, ಶಿವಕುಮಾರ್, ಸ್ಮಿತಾ, ಸ್ವಾತಿ, ರಶ್ಮಿ, ಯಶಸ್ವಿನಿ, ಚೌಡಯ್ಯ, ಕಿರಣ್, ಸಂದೀಪ್, ಗಂಗಾಧರ್, ಪ್ರದೀಪ್, ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular