ಮಂಡ್ಯ: ಶಾಲಾ ಕಾಲೇಜಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆಗೆ ಒತ್ತಾಯಿಸಿ, ಬನ್ನೂರು-ಮಂಡ್ಯ ಮಾರ್ಗ ಸಂಚರಿಸುವ ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಪ್ರತಿ ನಿತ್ಯ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿತ್ತು.
ಇನ್ನು ಕೆಲ ಬಸ್ ನಿಲ್ಲಿಸಿದ್ರು ಮಕ್ಕಳು ಪ್ರಾಣ ಪಣಕ್ಕಿಟ್ಟು ನೇತಾಡಿ ಹೋಗುವ ಪರಿಸ್ಥಿತಿ ಹಲವು ಬಾರಿ ಗಮನಕ್ಕು ತಂದರು ಕ್ಯಾರೆ ಎನ್ನದ ಅಧಿಕಾರಿಗಳು. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬನ್ನೂರು-ಮಂಡ್ಯ ಮಾರ್ಗದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಹೆಚ್ಚು ಬಸ್‌ಗಳನ್ನು ಬಿಡುವಂತೆ ಪತ್ತಾಯಿಸಿರು. ಸ್ಥಳಕ್ಕೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಭೇಟಿ, ಎರಡು ದಿನ ಸಮಯ ಕೋರಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿ. ಅವಶ್ಯಕತೆ ನೋಡಿಕೊಂಡು ಸೋಮವಾರದಿಂದಲೇ ಹೆಚ್ಚುವರಿ ಬಸ್ ಬಿಡ್ತೇವೆ ಎಂದು ಭರವಸೆ ನೀಡಿದರು.
