ಹುಣಸೂರು: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯ ಜತೆಗೆ ಕ್ರೀಡೆ, ಕಲೆ, ಸಾಹಿತ್ಯ, ಓದು, ಬರಹ, ಹಾಡು, ಕುಣಿತದಂತಹ ಹವ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ವ್ಯಕ್ತಿ ವಿಕಸನ ಗೊಳ್ಳಲಿದ್ದಾನೆ ಎಂದು ಕನ್ನಡ ಪ್ರಭ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ತಿಳಿಸಿದರು.

ನಗರದ ಡಿ.ದೇವರಾಜ ಅರಸು ಸರಕಾರಿ ಪ್ರಥಮ ದರ್ಜೆ ಕಾಲೇಜು 2024-25 ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್. ಸ್ಕೌಟ್, ಮತ್ತು ಗೈಡ್ ,ರೆಡ್ ಕ್ರಾಸ್ ಚಟುವಟಿಕೆಗಳ ಕಾರ್ಯಕ್ರಮದ ಪ್ರಧಾನ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು , ತಮ್ಮ ಜ್ಞಾನ ವನ್ನು ವೃದ್ಧಿಸಿಕೊಳ್ಳಬೇಕಾದರೆ, ನಿಮಗೆ ಓದಿನ ದಾಹವಿದ್ದರೆ ಸಾಲದು ಗುರು ಮತ್ತು ಗುರಿ ಹಾಗೆ ಹಿರಿಯರಿಗೆ ಗೌರವ ಇದ್ದರೆ ಮಾತ್ರ ಯಶಸ್ವಿ ಹಾದಿ ತುಳಿಯಲು ಸಾದ್ಯವೆಂದರು.
ಕಾಲೇಜು ದಿನಗಳಲ್ಲೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ವಿಶ್ವದ ಯಾವುದೇ ರೀತಿಯ ವಿಷಯವಿರಲಿ, ಮೊದಲಿಗೆ ಸಾಧಿಸುವ ಚಲವಿರಬೇಕು, ಸ್ಪರ್ಧಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಹುಮ್ಮಸ್ಸು ಇರಬೇಕು . ಇದರ ಜೊತೆಗೆ ಶಿಸ್ತು, ಪ್ರಾಮಾಣಿಕತೆ ಇದ್ದಲ್ಲಿ ನೀವು ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯ ಬಹುದು ಎಂದರು.
ವಿದ್ಯಾರ್ಥಿಗಳಿಗೆ ಶುರುವಿನಲ್ಲೆ ಅಧ್ಯಾಯನದ ಅಗತ್ಯವಿದ್ದು, ವಿದ್ಯ ಎನ್ನುವುದು ಬರಿ ಉದ್ದೋಗವಲ್ಲ ಅದು ನಿಮ್ಮ ಜ್ಞಾನದ ಸಂಕೇತವಾಗಿದೆ. ಕಲಿಕೆ ಮುಗಿಯದ ಸಾಧನವಾಗಿದ್ದು, ಪ್ರತಿನಿತ್ಯ ಕತೆ, ಕವನ, ಕಾದಂಬರಿ , ಪತ್ರಿಕೆಗಳನ್ನು ಓದುವುದರಿಂದ ನಿಮ್ಮ ಜ್ಞಾನ ಸರೋವರವಾಗಲಿದೆ. ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಡಿ.ಹರೀಶ್ ಗೌಡ , ವಿದ್ಯಾರ್ಥಿಗಳು ಸಾಧನೆಯ ಗುರಿ ಮುಟ್ಟಬೇಕಾದರೆ, ಅಧಿಕಾರ, ಹಣ, ಮೋಜಿನ ಹಿಂದೆ ಹೋಗಬೇಡಿ. ಸ್ಪರ್ಧಾತ್ಮಕ ಯುಗವಾಗಿರುವುದರಿಂದ. ಪ್ರತಿಯೊಂದಕ್ಕೂ ಸ್ಪರ್ಧೆ ಇದೆ ಅದನ್ನ ಭೇದಿಸಿ ಮುನ್ನುಗ್ಗುವ ಅನಿವಾರ್ಯತೆ ಇದೆ ಎಂದರು.
ವಿದ್ಯಾರ್ಥಿಗಳ ಕಲಿಕೆಗೆ ಹಲವು ಕ್ಷೇತ್ರಗಳು ಇದ್ದು, ಅವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗ್ರತೆಯಿಂದ ಆಯ್ಕೆ ಮಾಡಿಕೊಂಡು. ಯಾರೂ ಕೂಡ ಹುಟ್ಟಿನಿಂದಲೇ ಶ್ರೀಮಂತ ರಾಗುವುದಿಲ್ಲ, ನಿಮ್ಮ ಪರಿಶ್ರಮ ಮತ್ತು ನಿಮ್ಮ ಸರಿಯಾದ ಆಯ್ಕೆ ನಿಮ್ಮ ಜೀವನವನ್ನು ನಿರ್ಧರಿಸುತ್ತದೆ ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮಾ ಪುರ ನಾರಾಯಣ್ ಮಾತನಾಡಿದರು.
ಕಾಯ್ರಕ್ರಮದಲ್ಲಿ ಪ್ರಾಶುoಪಾಲ ಡಾ.ಸುರೇಶ್.ಬಿ.ಸಿ., ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಉಮಾಕಾಂತ್, ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ್, ಎನ್.ಎಸ್.ಎಸ್. ಸಂಚಾಲಕ ಜಗದೀಶ್, ರೆಡ್ ಕ್ರಾಸ್ ಸಂಚಾಲಕ ಸಂತೋಷ್, ಮಾದಪ್ಪ, ಕವಿತ ಆರ್.ಕಟ್ಟಿ, ಸುನಿಲ್ ಮನೋಜ್ ಇದ್ದರು.