ಮೈಸೂರು : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರತಿಯೊಬ್ಬರು ಎದುರಿಸಿದರೆ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ಆಶೋಕಪುರಂ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕೆ.ಬಿ. ರಮೇಶ್ ತಿಳಿಸಿದರು.
ಕುವೆಂಪುನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ೨೦೨೨-೨೩ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಲ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ದೈಹಿಕವಾಗಿ ಸದೃಢವಾಗಿದ್ದಾರೆ ಮಾನಸಿಕವಾಗಿಯೂ ಸದೃಡನಾಗಿರುತ್ತಾರೆ.
ವಿದ್ಯಾರ್ಥಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಪೊಲೀಸ್ ಇಲಾಖೆ ಪಾರದರ್ಶಕವಾಗಿದೆ. ಪೊಲೀಸ್‌ಗೆ ೪೦ ಸಾವಿರ ಸಂಬಳವಿದೆ ಬಂದು ಸೇರಿರಿ. ಹತ್ತಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಪ್ರಯತ್ನ ಮಾಡಿ ಯಾವುದಾದರೊಂದಿರಲ್ಲಿ ಆಯ್ಕೆಯಾಗುತ್ತೀರಿ ವಿದ್ಯಾರ್ಥಿ ಜೀವನ ಎಲ್ಲವನ್ನು ಬೇಕು ಎನಿಸುತ್ತದೆ. ದುಶ್ಚಟಗಳಿಗೆ ದೂರವಿರಿ ಮೊಬೈಲ್ ಹೆಚ್ಚಾಗಿ ಬಳಸಬೇಡಿ. ಓದಿನಕಡೆ ಹೆಚ್ಚು ಗಮನಕೊಡಿ.
ಕೆಲಸ ಸಿಗದಿದ್ದರೆ ನಿರಾಶರಾಗಬೇಡಿ ಕೃಷಿಯನ್ನು ಅವಲಂಬಿಸಿ ಸ್ವಾವಲಂಬಿಗಳಾಗಿ ನಿಮಗೇನಾದರೂ ಸಹಾಯ, ಸಹಕಾರ, ಮಾರ್ಗದರ್ಶನ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಗುಪ್ತವಾರ್ತದಳದ ವೃತ್ತ ನಿರೀಕ್ಷಕ ಬಸವರಾಜ್ ಮಾತನಾಡಿ ದೇವರಾಜ ಅರಸುರವರು ಹಾಸ್ಟೆಲ್ ನಿರ್ಮಿಸದಿದ್ದಾರೆ. ನಾವು ನೀವು ಈ ಜಾಗದಲ್ಲಿ ಇರಲು ಆಗುತ್ತಿರಲಿಲ್ಲ ಜ್ಞಾನ ಯಾರಸ್ವತ್ತು ಅಲ್ಲ ಯಾರು ಕಷ್ಟ ಪಡುತ್ತಾರೊ ಅವರಿಗೆ ಜ್ಞಾನ, ವಿದ್ಯೆ, ಕೆಲಸ ದೊರೆಯುತ್ತದೆ.
ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಓದಿದಂತಹ ಬಿ. ಶಿವಸ್ವಾಮಿ ಇಂದು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ವೈದ್ಯರಾಗಿರುವವರು ಇದ್ದಾರೆ ರಾಜ್ಯದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ ಆದ್ದರಿಂದ ಗುರಿ ಇಟ್ಟುಕೊಂಡು ಪ್ರಯತ್ನ ಮಾಡಿ ಎಂದರು.
ಸಮಾರoಭದಲ್ಲಿ ತಾಲ್ಲೂಕು ವಿಸ್ತರಣಾಧಿಕಾರಿ ಸತೀಶ್ ನಿವೃತ್ತ ಕಲ್ಯಾಣಾಧಿಕಾರಿ ಶಿವಮಲ್ಲಯ್ಯ, ಶರತ್ ಮಂಜು, ನಿಲಯ ಪಾಲಕರಾದ ಜಗದೀಶ್ ಕೋರಿ ಪರಶುರಾಂ, ಯಶವಂತ್, ನಾಗರಾಜ್, ರಮ್ಯ ರೇಖಾ ಹಾಜರಿದ್ದರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.