Sunday, April 20, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿಗಳು ಜಾನಪದದ ಕನ್ನಡ ಸಾರ ಅರಿಯಿರಿ

ವಿದ್ಯಾರ್ಥಿಗಳು ಜಾನಪದದ ಕನ್ನಡ ಸಾರ ಅರಿಯಿರಿ

ಯಳಂದೂರು: ವಿದ್ಯಾರ್ಥಿಗಳು ನಮ್ಮ ಜನಪದದಲ್ಲಿರುವ ಕನ್ನಡ ಸಾಹಿತ್ಯದ ಅರ್ಥವನ್ನು ಅರಿತು, ಇದನ್ನು ಬಳಸಿ ಮುಂದಿನ ಪೀಳಿಗೆಗೆ ಜೋಪಿಡುವ ಕೆಲಸವನ್ನು ಮಾಡಬೇಕು ಎಂದು ಸಂತೆಮರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಗೂಳೀಪುರ ನಾ. ಮಂಜುನಾಥಸ್ವಾಮಿ ಕರೆ ನೀಡಿದರು. ಅವರು ಶನಿವಾರ ತಾಲೂಕಿನ ವಡಗೆರೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಯಳಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ಕನ್ನಡ ಗೀತೆಗಳ ನೃತ್ಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ನಮ್ಮ ಭಾಷೆಯ ನಿರಂತರತೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ.

ಇಂದು ಪರಕೀಯ ಭಾಷೆಯ ಪ್ರಭಾವ ಹೆಚ್ಚಿದೆ. ಆದರೆ ನಮ್ಮಲ್ಲಿರುವ ಭಾಷೆಯ ಸೊಬಗು ವಿಭಿನ್ನವಾಗಿದೆ. ಪ್ರತಿ ಪದದ ಉಚ್ಚಾರಣೆಯಲ್ಲೇ ಭಾವಗಳನ್ನು ವ್ಯಕ್ತಪಡಿಸುವ ಗುಣವಿದೆ. ಇದನ್ನು ತಿಳಿದುಕೊಳ್ಳುವ ಕೆಲಸವನ್ನು ಮಾಡಬೇಕು. ನಮ್ಮ ಪೂರ್ವಜರು, ಗ್ರಾಮೀಣರು ತಮ್ಮ ಭಾಷೆಯಲ್ಲಿ ವಿಶೇಷ ನೈಪುಣ್ಯತೆ ಹೊಂದಿದ್ದರು. ಆದರೆ ಇಂದು ಅನ್ಯ ಭಾಷೆಯ ಪ್ರಭಾವದಿಂದ ಹಾಗೂ ನಗರೀಕರಣ ಪಾಶ್ಚಾತ್ಯ ಸಂಸ್ಕೃತಿ ನಮ್ಮನ್ನಾಳುತ್ತಿದೆ. ಜನಪದವನ್ನು ಇಂದು ನಾವು ಕಲಿತರೆ ಮುಂದಿನ ಪೀಳಿಗೆಗೆ ಇದನ್ನು ಜೋಪಾನ ಮಾಡುವ ಕೆಲಸವಾದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸುವಂತಾಗಬೇಕು ಎಂದು ಸಲಹೆ ನೀಡಿದರು. ಹಿರಿಯ ಪತ್ರಕರ್ತ ಶಿವಕುಮಾರ್ ಬೆಳ್ಳಿತಟ್ಟೆ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ದಿನಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂದು ನಮ್ಮನ್ನಾಳುತ್ತಿರುವ ಮೊಬೈಲ್‌ಗಳ ಬಳಕೆಯಲ್ಲಿ ಕನ್ನಡದಲ್ಲೇ ಟೈಪಿಸುವ ಕೆಲಸವನ್ನು ಮಾಡಬೇಕು, ಎಟಿಎಂನಲ್ಲೂ ಕನ್ನಡದಲ್ಲೇ ವ್ಯವಹರಿಸುವ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.

ಪಿಎಸ್‌ಐ ಚಂದ್ರಹಾಸ ನಾಯಕ್ ಮಾತನಾಡಿ, ಯಳಂದೂರು ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತು ಅತ್ಯಂತ ಸಕ್ರೀಯವಾಗಿದೆ. ಪ್ರತಿ ಶಾಲೆಗಳಲ್ಲೂ ಇಂತಹ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಇದರಿಂದ ಭಾಷೆ, ನಾಡುನುಡಿಯ ಬಗ್ಗೆ ಮಕ್ಕಳನ್ನು ಇನ್ನಷ್ಟು ಜಾಗೃತಗೊಳಿಸುವ ಕೆಲಸವನ್ನು ಮಾಡಿದಂತಾಗುತ್ತದೆ ಎಂದರು. ಕೃಷಿಕ ರೇವಣ್ಣ ಮಾತನಾಡಿ, ಸರ್ಕಾರಿ ಶಾಲೆ, ಪೊಲೀಸ್ ಠಾಣೆ ಕಚೇರಿಗಳಿಗೆ ನಮ್ಮ ನರ್ಸರಿಯಿಂದ ಉಚಿತವಾಗಿ ತೆಂಗಿನ ಗಿಡಗಳನ್ನು ನೀಡುತ್ತೇನೆ. ನಮ್ಮ ನಾಡು ನುಡಿಯನ್ನು, ಕನ್ನಡದ ಸೇವೆಯನ್ನು ಮಾಡುವ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಕೊಡುಗೆ ನೀಡುತ್ತೇನೆ ಎಂದು ಘೋಷಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣಣ್ಯರನ್ನು ಸನ್ಮಾನಿಸಲಾಯಿತು.

ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ ಆಶಯ ನುಡಿಗಳನ್ನಾಡಿದರು, ಕರವೇ ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಸಿಆರ್‌ಪಿ ಶಾಂತಮೂರ್ತಿ, ಪಪಂ ಮಾಜಿ ಉಪಾಧ್ಯಕ್ಷ ಭೀಮಪ್ಪ ಶಾಲೆಯ ಪ್ರಾಂಶುಪಾಲ ಬಸವಣ್ಣ ಮಾತನಾಡಿದರು. ಸಮಾಜ ಸೇವಕ ಗಣಿಗನೂರು ಲೋಕೇಶ್, ಗೌಡಹಳ್ಳಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ ಜಯಶಂಕರ್, ಮಾಜಿ ಅಧ್ಯಕ್ಷ ರವಿ, ಪ್ರೇಮ, ಗೋಪಾಲ್, ಡಿ.ಪಿ. ಮಹೇಶ್, ಫೈರೋಜ್‌ಖಾನ್, ನವಾಜ್‌ಬೇಗ್, ಪ್ರಸಾದ್, ನಾಗರಾಜು, ಶಶಿಧರ, ಪ್ರಬುಲ್ಲಾ, ನಂದೀಶ್, ಶ್ಯಾಮ್‌ಸುಂದರ್, ಚಾಂದಿನಿ, ಮಮತ, ಎಎಸ್‌ಐ ಗೋವಿಂದರಾಜು, ಮುರುಳಿ, ಕೇಶವನಾಯಕ ಸೇರಿದಂತೆ ಅನೇಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular