ವಿದ್ಯಾರ್ಥಿಗಳು ಮುಂದಿನ ಪೀಳಿಗೆಯನ್ನು ಜನಪದವನ್ನುಮುನ್ನಡೆಸುವವರು. ಈಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಲೆಯ ಆಶಯಗಳನ್ನು ತಿಳಿದುಕೊಳ್ಳುತ್ತಿರುವುದು ಸಂತೋಷವಾಗುತ್ತಿದೆ. ಕಳೆದ ಮೂವತ್ತು ವರ್ಷಗಳಿಂದ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಲೋಕದಮುನ್ನಡೆಗೆ ಶ್ರಮಿಸುತ್ತಿರುವ ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದು ಜಾನಪದ ತಜ್ಞ ಹಾಗೂ ಚಿತ್ರ ನಿರ್ದೇಶಕ ಸಿರಿಗಂಧ ಶ್ರೀನಿವಾಸಮೂರ್ತಿ ತಿಳಿಸಿದರು.
ಜಾನಪದ ಲೋಕದಲ್ಲಿ ಲೋಕಸಿರಿ ತಿಂಗಳ ಅತಿಥಿ-೮೪ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಡೋಜ ನಾಗೇಗೌಡರೊಂದಿಗೆಅವರುದುಡಿದ ಕ್ಷಣಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಭೂತಿಕೆರೆ ಗ್ರಾಮ ಪಂಚಾಯಿತಿ ಪಂಚಾಯತ್‌ಅಭಿವೃದ್ಧಿಅಧಿಕಾರಿ ಗೋಮತಿ ಬಿ.ಕೆ ಮಾತನಾಡಿ, ಜಾನಪದ ಲೋಕ ಗ್ರಾಮೀಣ ಸಂಸ್ಕೃತಿಯನ್ನು ಮೆರೆಸುವಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.

ಜಾನಪದ ಲೋಕದಆಡಳಿತಾಧಿಕಾರಿಯಾದ ಶ್ರೀಮತಿ ಸರಸವಾಣಿಯವರು ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಕಲಾವಿದರನ್ನು ಗೌರವಿಸಿರುವುದು ನಮ್ಮಸಂಸ್ಥೆಗೆ ಶ್ಲಾಘನೀಯ ವಿಷಯವಾಗಿದೆ. ಎಚ್.ಎಲ್.ನಾಗೇಗೌಡರ ನೆನಪಿನ ಕಾರ್ಯಕ್ರಮ ಎನ್ನುವುಕ್ಕಿಂತ ಜೀವಂತ ಕಾರ್ಯಕ್ರಮ, ಅವರು ಬೆಳೆಸಿದ ಹೂ, ಹಣ್ಣು, ಮರ, ಗಿಡಗಳು ನಮ್ಮೂಟ್ಟಿಗೆಜೀವಂತವಾಗಿವೆ. ಎಷ್ಟೊಂದು ಹಸಿರನ್ನು ಬೆಳೆಸಿ, ಅವರ ಉಸಿರನ್ನು ನಮ್ಮಜೊತೆ ಬಿಟ್ಟು ಹೋಗಿದ್ದಾರೆ. ಅದ್ದುದರಿಂದ ನಾಗೇಗೌಡರು ಜೀವಂತವಾಗಿ ನಮ್ಮೊಂದಿಗೆಇದ್ದಾರೆ ಎಂಬ ಭಾವನೆ ನನಗಿದೆ ಎಂದರು.
ಲೋಕಸಿರಿ ಗೌರವ ಸ್ವೀಕರಿಸಿದಶ್ರೀ ಸಿ.ವಿ.ವೀರಣ್ಣ ತಮ್ಮಕಲೆಯನ್ನುಕಲಿತ ಅನುಭವಗಳನ್ನು ಹಂಚಿಕೊಂಡರು.
ವೀರಭದ್ರನ ಕುಣಿತದ ಮೂಲಕ ಹಾಗೂ ವೀರಭದ್ರನ, ದಕ್ಷಬ್ರಹ್ಮನಕುರಿತ ಒಡಪುಗಳನ್ನು ಹೇಳುವ ಮೂಲಕ ಎಲ್ಲರನ್ನು ರಂಜಿಸಿದರು. ವೀರಭದ್ರನ ವೇಷಭೂಷಣ, ಉಡುಗೆ-ತೊಡುಗೆಗಳ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಮನಗರದ ಸರ್ಕಾರಿಇಂಜಿನಿಯರಿಂಗ್‌ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕರಾದಶ್ರೀಮತಿ ರಾಣಿ ಮತ್ತುವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿಭಾಗವಹಿಸಿದರು. ಕ್ಯೂರೇಟರ್ ಡಾ.ರವಿ ಯು.ಎಂ,ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಾಡೋಜ ನಾಗೇಗೌಡ ಕಲಾಶಾಲೆಯ ವಿದ್ಯಾರ್ಥಿಗಳು, ಲೋಕದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.