ಮದ್ದೂರು: ರಾಷ್ಟ್ರೀಯ ಸೇವಾಯೋಜನೆಯು ಶಿಬಿರಾರ್ಥಿಗಳಿಗೆ ಸೇವಾಮನೋಭಾವ ಹಾಗೂ ಜೀವನ ಮೌಲ್ಯವನ್ನ ಕಲಿಸುವಲ್ಲಿ ಮಹತ್ತರವಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಗಳಲ್ಲಿ ಭಾಗವಹಿಸಬೇಕೆಂದು ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಹೇಳಿದರು.
ತಾಲ್ಲೂಕಿನ ಬೆಳತೂರು ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಟಾಟಿಸಿ ಅವರು ಮಾತನಾಡಿದರು.
ಭಾರತವು ಗಾಮೀಣ ಪ್ರದೇಶಗಳಿಂದ ಕೂಡಿದ್ದು ಗಾಂಧೀಜಿಯವರ ಪರಿಕಲ್ಪನೆಯಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾಯೋಜನೆಯ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳುವುದರ ಮೂಲಕ ಭಾವೈಕ್ಯತೆ, ಸೌಹಾರ್ದತೆ, ಸಹಕಾರ, ಸಂಯಮ, ವ್ಯಕ್ತಿತ್ವ ವಿಕಸನ, ಸ್ವಚ್ಚತೆ ಒಳಗೊಂಡಂತೆ ಜೀವನದ ಮೌಲ್ಯಗಳನ್ನ ಅಳವಡಿಸಿಕೊಳ್ಳುವುದರ ಮೂಲಕ ಸಮಾಜಮುಖ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಇಂದಿನ ಶಿಕ್ಷಣ ಹಾಗೂ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಕೇವಲ ಅಂಕ ಗಳಿಕೆೆಗೆ ಸೀಮಿತವಾಗುತ್ತಿರುವುದು ವಿಷದಾನೀಯ ಎಂದ ಅವರು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಹಾಗೂ ಸೇವಾ ಶಿಬಿರಗಳಲ್ಲಿ ಭಾಗವಹಿಸಿ ಮಾನವೀಯ ಗುಣಗಳನ್ನ ಮೈಗೊಡಿಸಿಕೊಂಡು ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳುವುದರ ಜೊತೆಗೆ ಗ್ರಾಮೀಣ ಪ್ರದೇಶದ ಜನರ ಅಭ್ಯೂದ್ಯಾಯಕ್ಕಾಗಿ ದುಡಿಯಬೇಕೆಂದು ಹೇಳಿದರು.
ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ನಿರ್ಮಲಾ ಕೆಂಪಯ್ಯ, ಗ್ರಾಂ.ಪಂ. ಸದಸ್ಯರಾದ ಡಿ.ನಳಿನ ಕುಮಾರಿ, ಅನಂತರಾಮು, ಮುಖಂಡರಾದ ಬಿ.ಎಂ.ಶಿವರಾಮು, ಎಂ.ಶಿವರಾಜು ಪ್ರಾಂಶುಪಾಲರುಗಳಾದ ಯು.ಎಸ್.ಶಿವಕುಮಾರ್, ಜಿ.ಎಸ್.ಶಂಕರೇಗೌಡ, ಶಿಬಿರಾಧಿಕಾರಿಗಳಾದ ಹೆಚ್.ಎಸ್.ಪಂಚಲಿಂಗೇಗೌಡ ಹಾಗೂ ಸಹ ಶಿಬಿರಾಧಿಗಳಾದ ರೇವಣ್ಣ ಎನ್, ಜಯವರ್ಧನ್ ಸಿ, ಎಂ.ಟಿ. ಮೋಹನ್‌ಕುಮಾರ್, ಜಿ.ಸುರೇಂದ್ರ, ಬಿ.ಸಿ.ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.