ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಂದೆ-ತಾಯಿಗಳಿಗೆ, ಗುರು-ಹಿರಿಯರಿಗೆ ಗ್ರಾಮಕ್ಕೆ ಕೀರ್ತಿ ತಂದು ಉತ್ತಮ ವಿದ್ಯಾಭ್ಯಾಸ ದೊಂದಿಗೆ ಉನ್ನತ ಸ್ಥಾನಕ್ಕೆ ಏರಬೇಕು ಎಂದು ಗಂಧನಹಳ್ಳಿ ಪಿಡಿಒ ಡಿ ಎನ್ ಚಂದ್ರಶೇಖರ್ ಹೇಳಿದರು.
ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಗಂಧನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿರುವ ಕು|| ಸುಸ್ಮಿತ 625 ಕ್ಕೆ 575 ಕು|| ವಿದ್ಯಾಶ್ರೀ 625ಕ್ಕೆ 512 ಮತ್ತು ಕು|| ಪ್ರಿಯಾಂಕ 625ಕ್ಕೆ 501 ಅಂಕ ಗಳಿಸಿ ಗ್ರಾಮಕ್ಕೆ ಮತ್ತು ಅವರ ತಂದೆ – ತಾಯಿಗಳಿಗೆ ಗೌರವ ತಂದಿದ್ದು ಮುಂದಿನ ವಿದ್ಯಾಬ್ಯಾಸ ಇದೇ ತರಹನಾಗಿ ಮುಂದುವರೆದು ಗುರಿ ಮುಟ್ಟಬೇಕೆಂದು ಎಂದು ತಿಳಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಜಲ ಮೂಲಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗಿ ಕುಡಿಯಲು ಯೋಗ್ಯ ಎಂದು ಪರೀಕ್ಷಕ ಮಂಜುನಾಥ್ ರವರು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.
ಅಧ್ಯಕ್ಷರಾದ ಶ್ರೀಮತಿ ತಾರಾ, ಉಪಾದ್ಯಕ್ಷರಾದ ಶ್ರೀ ಅನಂತಕುಮಾರ್ ಸರ್ವ ಸದಸ್ಯರು, ದ್ವಿತಿಯ ದರ್ಜೆ ಲೆಕ್ಕ ಸಹಾಯಕರಾದ ಶ್ರೀ ಲೋಕೇಶ, ಕಾರ್ಯದರ್ಶಿ ಶ್ರೀಮತಿ ಕುಮಾರಿ ಶೋಭ, ಡಿ.ಇ.ಓ ಶ್ರೀ ರವೀಶ ಜಿ.ಬಿ. ಬಿಲ್ ಕಲೆಕ್ಟರ್ ಮಹೇಶ ಎಸ್. ನೀರುಗಂಟಿಗಳಾದ ಶ್ರೀ ಗಿರೀಶ ಹೆಚ್. ಎಸ್. ಶ್ರೀ ಶಿವರಾಜ್ ಜಿ.ಎಸ್. ಶ್ರೀ ಪುನೀತ್ ಕುಮಾರ್ ಇನ್ನಿತರರು ಭಾಗವಹಿಸಿದರು.