ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳವಳಿಯ ತ್ಯಾಗ, ಬಲಿದಾನ ಮತ್ತು ಇತಿಹಾಸವನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಶ್ರೇಷ್ಠ ನಾಗರಿಕರಾಗಿ ರಾಷ್ಟ್ರವನ್ನು ಮುನ್ನಡೆಸಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಶಿವನಂಜಪ್ಪ ತಿಳಿಸಿದರು.
ಅವರು ಅಮಚವಾಡಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತ ರಾಜೇಂದ್ರ ರವರು ದ್ವಿತೀಯ ಪಿಯುಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ರಾಜೇಂದ್ರ ,ಮಾನಸ, ಕವನ, ಪೂಜಾ ,ಪವನ್ ಕುಮಾರ್, ನಾಗರತ್ನ ರವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.

ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಭಾರತಕ್ಕೆ ನಿರಂತರವಾದ ವಿದೇಶಿ ದಾಳಿಗಳನ್ನು ತಡೆದು ಭಾರತದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿದ ಭಾರತೀಯರನ್ನು ಸದಾ ನೆನೆಸಿಕೊಳ್ಳಬೇಕು. ಸ್ವಾತಂತ್ರ್ಯ ಚಳುವಳಿ ಎರಡು ಶತಮಾನಕ್ಕೂ ಹೆಚ್ಚು ಸುದೀರ್ಘಕಾಲ ನಡೆದ ಹೋರಾಟ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಹುತಾತ್ಮ ಮಂಗಲ ಪಾಂಡೆ ಬಲಿದಾನದ ಮೂಲಕ ಆರಂಭವಾದ ಚಳುವಳಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಾಣಿ ಚೆನ್ನಮ್ಮ ,ಸಂಗೊಳ್ಳಿ ರಾಯಣ್ಣ,ಬಾಲಗಂಗಾಧರ ತಿಲಕ್ ಲಾಲಾ ಲಜಪತ್ ರಾಯ್, ಬಿಪಿನ್ ಚಂದ್ರ ಪಾಲ್ ,ಭಗತ್ ಸಿಂಗ್ ರಾಜಗುರು ,ಸುಖದೇವ್, ಮದನ್ ಲಾಲ್ ಧಿಂಗ್ರಾ,ಉದಾಮಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮಹಾತ್ಮ ಗಾಂಧೀಜಿ ಸರ್ದಾರ್ ವಲ್ಲಭಭಾಯಿ ಪಟೇಲ್ ನೆಹರು ಮುಂತಾದ ಸಾವಿರಾರು ರಾಷ್ಟ್ರ ನಾಯಕರು ಹಾಗೂ ಲಕ್ಷಾಂತರ ರೈತರು ಯುವಕರು ವಿದ್ಯಾರ್ಥಿಗಳು ಮಹಿಳೆಯರು ವಕೀಲರು ಎಲ್ಲ ಕ್ಷೇತ್ರದ ಜನ ಸಾಮಾನ್ಯರ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಪ್ರತಿಫಲವಾಗಿ ಸ್ವಾತಂತ್ರ ದೊರೆತಿದ್ದು ಭಾರತ ಇಂದು ಜಗತ್ತಿನ ಶ್ರೇಷ್ಠ ಭಾರತವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ ಮುಂದಿನ ಭವಿಷ್ಯ ಜಗತ್ತಿನ ಶ್ರೇಷ್ಠ ರಾಷ್ಟ್ರ ಭಾರತವಾಗಿದೆ ಎಂದರು.
ಉಪನ್ಯಾಸಕರಾದ ಆರ್. ಮೂರ್ತಿ ಮಾತನಾಡಿ, ಪಂಚಪ್ರಾಣ ಕಾರ್ಯಕ್ರಮದ ಅಂಗವಾಗಿ ಗಿಡಗಳನ್ನು, ಹಾಗೂ ಮಣ್ಣಿನ ದೀಪ ಹಚ್ಚಿ , ರಾಷ್ಟ್ರ ಧ್ವಜ , ರಾಷ್ಟ್ರ ಗೀತೆ ಗಳ ಬಗ್ಗೆ ವಿವರಿಸಿದರು.
ಉಪನ್ಯಾಸಕರಾದ ಶಿವ ಸ್ವಾಮಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದೆ. ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶದಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸುತ್ತಿದೆ ಎಂದರು.
ವಿದ್ಯಾರ್ಥಿನಿ ಮಹಾಲಕ್ಷ್ಮಿ ಸ್ವಾತಂತ್ರ್ಯ ಚಳುವಳಿಯ ಹೋರಾಟದ ವಿವರವನ್ನು ತಿಳಿಸಿದರು.
ಉಪನ್ಯಾಸಕರಾದ ಶಿವಸ್ವಾಮಿ ,ಶ್ರೀಕಂಠನಾಯಕ, ಶೃತಿ , ಸುರೇಶ್ ,ಆನಂದ್ , ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
